Home ಜಾಲತಾಣದಿಂದ ತುಳು, ದೈವ–ದೇವರುಗಳು ಮಾತಾಡುವಂತಹ ಭಾಷೆ ಎಂದ ಯು.ಟಿ.ಖಾದರ್

ತುಳು, ದೈವ–ದೇವರುಗಳು ಮಾತಾಡುವಂತಹ ಭಾಷೆ ಎಂದ ಯು.ಟಿ.ಖಾದರ್

ಬೆಂಗಳೂರು: ತುಳು ಭಾಷೆ, ದೈವ–ದೇವರುಗಳು ಮಾತಾಡುವಂತಹ ಭಾಷೆಯಾಗಿದ್ದು, ಇದನ್ನು ಎರಡನೇ ರಾಜ್ಯಭಾಷೆಯಾಗಿ ಘೋಷಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್ ಆಗ್ರಹಿಸಿದ ಪ್ರಸಂಗ ವಿಧಾನಸಭಾ ಕಲಾಪದಲ್ಲಿಂದು ನಡೆಯಿತು.

  ತುಳು ಭಾಷೆಗೆ ಅದರದೇ ಆದಂತಹ ಇತಿಹಾಸವಿದೆ ಮತ್ತು ಸಂಸ್ಕೃತಿ ಇದೆ. ತುಳು ದೈವ–ದೇವರುಗಳು ಮಾತಾಡುವಂತಹ ಭಾಷೆ ತುಳು, ಹಾಗಾಗಿ ಈ ಭಾಷೆಯನ್ನು ಎರಡನೇ ರಾಜ್ಯಭಾಷೆಯನ್ನಾಗಿ ಘೊಷಿಸಬೇಕು ಎಂದು ಖಾದರ್ ಆಗ್ರಹಿಸಿದರು.

ಆಗ ಮಧ್ಯಪ್ರವೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಇವರ ಜಿಲ್ಲೆಗಳಲ್ಲಿ ದೇವರು ಮಾತನಾಡುತ್ತವೆ,  ದೇವರು ತುಳುವಿನಲ್ಲಿ ಮಾತಾಡ್ತಾರಾ ಎಂದು ವ್ಯಂಗ್ಯವಾಡಿದರು.

Join Whatsapp
Exit mobile version