ಟ್ರಾನ್ಸ್ ಫಾರ್ಮರ್‌ ಸ್ಪೋಟ; ತಂದೆ-ಮಗಳು ದಾರುಣ ಸಾವು

Prasthutha|

ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಹೋಗುವಾಗ ಟ್ರಾನ್ಸ್‌ ಫಾರ್ಮರ್‌ ಸ್ಫೋಟಗೊಂಡು ಬೆಂಕಿ ತಗುಲಿದ ಪರಿಣಾಮ ತಂದೆ ಮಗಳು ಮೃತಪಟ್ಟಿರುವ ದುರ್ಘ‌ಟನೆ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

- Advertisement -

ಮೃತರನ್ನು ಮಂಗನಹಳ್ಳಿ ನಿವಾಸಿ ಶಿವರಾಜ್‌(55) ಮತ್ತು ಚೈತನ್ಯ(19) ಎಂದು ಗುರುತಿಸಲಾಗಿದೆ. ಟ್ರಾನ್ಸ್‌ಫಾರ್ಮರ್‌ನ ಕೆಲ ತುಂಡುಗಳು ಇಬ್ಬರ ದೇಹಕ್ಕೆ  ತಗುಲಿದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ತಕ್ಷಣವೇ ಸ್ಥಳೀಯರು ಸುಟ್ಟ ಗಾಯಗಳಿಂದ ನಡು ರಸ್ತೆಯಲ್ಲಿ ನರಳುತ್ತಿದ್ದ ತಂದೆ, ಮಗಳನ್ನು ಆ್ಯಂಬುಲೆನ್ಸ್‌ ಮೂಲಕ ವಿಕ್ಟೋರಿಯಾ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಶಿವರಾಜ್‌, ಮಗಳು ಚೈತನ್ಯಾಳ ಮದುವೆ ಸಿದ್ಧತೆಯಲ್ಲಿದ್ದರು. ಇತ್ತೀಚೆಗೆ ನಿಶ್ತಿತಾರ್ಥ ಕೂಡ ಮುಗಿದಿದ್ದು, ತಂದೆ ಮತ್ತು ಮಗಳು ದ್ವಿಚಕ್ರ ವಾಹನದಲ್ಲಿ ಕಲ್ಯಾಣ ಮಂಟಪ ಬುಕ್‌ ಮಾಡಲು ಹೋಗಿ

- Advertisement -

ವಾಪಸ್‌ ಬರುವಾಗ ಮಂಗನಹಳ್ಳಿ ಸೇತುವೆ ಬಳಿಯ ಟ್ರಾನ್ಸ್‌ಫಾರ್ಮರ್‌ ಸ್ಫೋಟಗೊಂಡಿದೆ.

ಬುಧವಾರ ರಾತ್ರಿ ಶಿವರಾಜ್‌ ಚಿಕಿತ್ಸೆ ಫ‌ಲಕಾರಿಯಾಗದೆ ಸಾವನ್ನಪ್ಪಿದ್ದು, ಗುರುವಾರ ನಸುಕಿನ ವೇಳೆ ಪುತ್ರಿ ಚೈತನ್ಯ ತುರ್ತುನಿಗಾ ಘಟಕದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಘಟನೆಗೆ ಸಂಬಂಧಿಸಿ ಬೆಸ್ಕಾಂ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Join Whatsapp
Exit mobile version