Home ಟಾಪ್ ಸುದ್ದಿಗಳು ಖ್ಯಾತ ನಟ ಸಿಂಬು ಕಾರು ಹರಿದು ವೃದ್ಧ ಸಾವು: ಚಾಲಕ ಬಂಧನ

ಖ್ಯಾತ ನಟ ಸಿಂಬು ಕಾರು ಹರಿದು ವೃದ್ಧ ಸಾವು: ಚಾಲಕ ಬಂಧನ

ಚೆನ್ನೈ: ಕಾಲಿವುಡ್ ಖ್ಯಾತ ನಟ ಸಿಂಬು ಒಡೆತನದ ಐಶಾರಾಮಿ ಕಾರು ವ್ಯಕ್ತಿಯೋರ್ವನನ್ನು ಬಲಿ ಪಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಪಘಾತಕ್ಕೀಡಾದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ.

ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಮುನುಸ್ವಾಮಿ ಎಂದು ಗುರುತಿಸಲಾಗಿದ್ದು, 70ರ ವಯಸ್ಸಿನ ಇವರು ತೇನಂಪೇಟೆ ಪ್ರದೇಶದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು.

ಕೆಲವೇ ದಿನಗಳ ಹಿಂದೆ ಅವರಿಗೆ ಕಾಲಿಗೆ ಪೆಟ್ಟಾಗಿದ್ದರಿಂದ, ತೆವಳುತ್ತಾ ಕಳೆದ ಮಾ.18 ರಂದು ರಸ್ತೆ ದಾಟುತ್ತಿದ್ದಾಗ ಸಿಂಬು ಹೆಸರಿನಲ್ಲಿರುವ ಕಾರು ಮುನುಸ್ವಾಮಿ ಮೇಲೆ ಹರಿದಿದೆ.

ಗಂಭೀರ ಗಾಯಗೊಂಡು ತೀವ್ರ ರಕ್ತಸ್ರಾವವಾಗಿದ್ದ ಮುನುಸ್ವಾಮಿ‌ ಅವರನ್ನು ಕೂಡಲೇ ಸ್ಥಳಿಯರು  ಆಸ್ಪತ್ರೆಗೆ ದಾಖಲಿಸಿದರಾದರೂ‌ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಅಪಘಾತಕ್ಕೀಡಾದ ತಕ್ಷಣವೇ ಕಾರಿನಲ್ಲಿದ್ದವರು ಪರಾರಿ ಆಗಿದ್ದಾರೆ. ಹಾಗಾಗಿ ಯಾರೆಲ್ಲ ಕಾರಿನಲ್ಲಿ ಇದ್ದರು ಎಂದು ಇನ್ನೂ ಪತ್ತೆ ಆಗಿಲ್ಲ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಚಾಲಕ ಸೆಲ್ವಂ ಎಂಬುವವರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ್ದು, ಹಚ್ಚಿನ ವಿಚಾರಣೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

Join Whatsapp
Exit mobile version