ಬೆಂಗಳೂರು: ನಗರದಲ್ಲಿ ಹೊಸದಾಗಿ ಸಂಚಾರ ವಿಭಾಗಕ್ಕೆ ಸ್ಪೆಷಲ್ ಟ್ರಾಫಿಕ್ ಕಮಿಷನರ್ ಆಗಿ ಆಡಳಿತ ವಿಭಾಗದ
ಎಡಿಜಿಪಿ ಎಂ.ಎ.ಸಲೀಂ ಅವರನ್ನು ನೇಮಿಸುವ ಮೂಲಕ ರಾಜ್ಯ ಸರಕಾರ 11 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಸಂಚಾರ ವಿಭಾಗದ ಮುಖ್ಯಸ್ಥರಾಗಿ ಅಬ್ದುಲ್ ಸಲೀಂ ವರ್ಗಾವಣೆ ಮಾಡಲಾಗಿದೆ.ಅವರಿದ್ದ ಆಡಳಿತ ವಿಭಾಗಕ್ಕೆ ಸಿಐಡಿ ಎಡಿಜಿಪಿ
ಉಮೇಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಮಂಗಳೂರು ವಲಯ ಐಜಿಪಿ ದಿವ್ಯಾಜ್ಯೋತಿ ರಾಯ್ ಅವರನ್ನು ಮಾನವ ಹಕ್ಕುಗಳ ಆಯೋಗ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.
ರವಿಕಾಂತೇಗೌಡ – ಸಿಐಡಿ,ಲೋಕೇಶ್ ಕುಮಾರ್ – ಬಳ್ಳಾರಿ ಐಜಿ,ರಮಣ್ ಗುಪ್ತಾ- ನಗರದ ಗುಪ್ತಚರದಳಕ್ಕೆ ವರ್ಗಾವಣೆ ಮಾಡಲಾಗಿದೆ.
ಚಂದ್ರಗುಪ್ತ – ಮಂಗಳೂರು ಪಶ್ಚಿಮ ವಲಯ ಡಿಐಜಿಯಾಗಿ ಶರಣಪ್ಪ – ಜಂಟಿ ಪೊಲೀಸ್ ಆಯುಕ್ತ ಸಿಸಿಬಿಗೆ,ಅನುಚೇತ್ – ಜಂಟಿ ಪೊಲೀಸ್ ಆಯುಕ್ತ ಸಂಚಾರ ವಿಭಾಗ,ರವಿ ಡಿ ಚೆನ್ನಣ್ಣ ನವರ್ – ಕಿಯೋನಿಕ್ಸ್ ನಿರ್ದೇಶಕರಾಗಿ,ಮೈಸೂರು ಪೊಲೀಸ್ ಆಯುಕ್ತರಾಗಿ,ರಮೇಶ್ ಬನ್ನೋತ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಕಮಿಷನರ್ ನೇಮಕ:
ಎಂ ಎ ಸಲೀಂ ರನ್ನು ಸ್ಪೆಷಲ್ ಟ್ರಾಫಿಕ್ ಕಮಿಷನರ್ ಆಗಿ ನೇಮಕ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಸರ್ಕಾರ ಟ್ರಾಫಿಕ್ ಕಮಿಷನರ್ ಹುದ್ದೆಗೆ ಎಡಿಜಿಪಿ ದರ್ಜೆ ಅಧಿಕಾರಿ ನೇಮಿಸಿದೆ. ಬೆಂಗಳೂರು ಕಮಿಷನರ್ ಹುದ್ದೆ ಕೂಡ ಎಡಿಜಿಪಿ ದರ್ಜೆಯನ್ನು ಹೊಂದಿದೆ. ಈಗಿರುವ ಕಮಿಷನರ್ ಪ್ರತಾಪ್ ರೆಡ್ಡಿ ಎಡಿಜಿಪಿ ರ್ಯಾಂಕ್ ಅಧಿಕಾರಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚು ಹಾಗೂ ಸಂಚಾರಿ ಇಲಾಖೆಯಲ್ಲಿ ಕೆಲ ಮಹತ್ವದ ಬದಲಾವಣೆ ಆಗಬೇಕಿರುವ ಹಿನ್ನಲೆಯಲ್ಲಿ ಎಂ ಎ ಸಲೀಂ ನೇಮಕ ಮಾಡಿದ್ದಾರೆ. ಸರ್ಕಾರದ ಈ ನಿರ್ಧಾರ ಇಬ್ಬರು ಎಡಿಜಿಪಿ ಮಟ್ಟದ ಅಧಿಕಾರಿಗಳ ನೇಮಕ ಹಿನ್ನಲೆಯಲ್ಲಿ ಸಮನ್ವಯದ ತಿಕ್ಕಾಟಕ್ಕೆ ಕಾರಣವಾಗಲಿದೆಯಾ ಎನ್ನುವ ಪ್ರಶ್ನೆ ಮೂಡಿದೆ.