Home ಟಾಪ್ ಸುದ್ದಿಗಳು ವ್ಯಾಪಕ ವಿರೋಧಗಳ ಬಳಿಕ ಮಸೀದಿ ಮಾದರಿಯ ಬಸ್ ನಿಲ್ದಾಣವು ಹಿಂದೂ ಧಾರ್ಮಿಕ ಅಸ್ಮಿತೆಯ ರೂಪಕ್ಕೆ ಬದಲಾವಣೆ

ವ್ಯಾಪಕ ವಿರೋಧಗಳ ಬಳಿಕ ಮಸೀದಿ ಮಾದರಿಯ ಬಸ್ ನಿಲ್ದಾಣವು ಹಿಂದೂ ಧಾರ್ಮಿಕ ಅಸ್ಮಿತೆಯ ರೂಪಕ್ಕೆ ಬದಲಾವಣೆ

  • ►ಒಳಗಡೆ ಚಾಮುಂಡೇಶ್ವರಿ ದೇವಸ್ಥಾನದ ಗೋಪುರದ ಫೋಟೋ ಅಳವಡಿಕೆ

ಮೈಸೂರು: ಮಸೀದಿ ಮಾದರಿಯ ಬಸ್ ನಿಲ್ದಾಣ ನಿರ್ಮಾಣ ಮಾಡಿದ್ದಕ್ಕೆ ಹಲವು ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿದ್ದು, ಇದೀಗ ಅದರ ರೂಪವನ್ನು ಬದಲಾಯಿಸಲಾಗಿದೆ.

ಈ ನಡೆಯನ್ನು ಕಟುವಾಗಿ ವಿರೋಧಿಸಿದ ಸಂಸದ ಪ್ರತಾಪ್ ಸಿಂಹ, ಗುತ್ತಿಗೆದಾರರು ಮಸೀದಿ ಗೋಪುರ ಹೋಲುವ ಬಸ್‌ ನಿಲ್ದಾಣ ನಿರ್ಮಿಸಿದ್ದಾರೆ. ಇದನ್ನು ಬದಲಿಸಲು 3 ದಿನಗಳ ಗಡುವು ನೀಡಿದ್ದೇನೆ. ಬದಲಿಸದಿದ್ದರೆ, ಜೆಸಿಬಿ ತರಿಸಿ ಕೆಡವಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದ್ದರು.

ಇದೇನು ಪಾಕಿಸ್ತಾನವಾ ? ಎಂದು ಹಲವರು ವಿರೋಧ ವ್ಯಕ್ತಪಡಿಸಿದ್ದರು. ಈ ಎಲ್ಲಾ ಬೆಳವಣಿಗೆಯ ಬಳಿಕ ನಿಲ್ದಾಣ ವಿನ್ಯಾಸ ಬದಲಾಯಿಸಲಾಗಿದೆ.

ಮಸೀದಿ ಹೋಲುವ ಗುಮ್ಮಟದ ವಿನ್ಯಾಸದ ಮೇಲೆ ಕಳಶಗಳನ್ನು ಜೋಡಿಸಿ, ಹಿಂದೂ ಧಾರ್ಮಿಕ ಅಸ್ಮಿತೆಯ ರೂಪವನ್ನು ನೀಡಲಾಗಿದೆ. ಬಸ್ ನಿಲ್ದಾಣದ ಒಳಗಡೆ ಮೈಸೂರು ಅರಮನೆ, ರಾಮದಾಸ್ ಹಾಗೂ ಚಾಮುಂಡೇಶ್ವರಿ ದೇವಸ್ಥಾನದ ಗೋಪುರದ ಫೋಟೊಗಳನ್ನು ಅಳವಡಿಸಲಾಗಿದೆ.

Join Whatsapp
Exit mobile version