Home ಟಾಪ್ ಸುದ್ದಿಗಳು ಟ್ರಾಪಿಕ್ ಟಫ್ ರೂಲ್ಸ್ ಜಾರಿ: ವಾಹನಗಳ ಹಾರ್ನ್ ,ಸೈಲೆನ್ಸರ್ ಬದಲಾಯಿಸಿದರೆ ಭಾರೀ ದಂಡ

ಟ್ರಾಪಿಕ್ ಟಫ್ ರೂಲ್ಸ್ ಜಾರಿ: ವಾಹನಗಳ ಹಾರ್ನ್ ,ಸೈಲೆನ್ಸರ್ ಬದಲಾಯಿಸಿದರೆ ಭಾರೀ ದಂಡ

►ನಂಬರ್ ಪ್ಲೇಟಿನಲ್ಲಿ ಒಂದಕ್ಷರ,ಸಂಖ್ಯೆ ವಿನ್ಯಾಸ ಬದಲಾದರೆ ತಲಾ 500 ದಂಡ

ಬೆಂಗಳೂರು : ವಾಹನಗಳಲ್ಲಿ ಸೈಲೆನ್ಸರ್‌ , ಕರ್ಕಶ ಹಾರ್ನ್‌ ಹಾಕಿಸಿ ಶಬ್ಧ ಮಾಲಿನ್ಯ ಉಂಟು ಮಾಡುವ ವಾಹನ ಸವಾರರಿಗೆ ಎಚ್ಚರಿಕೆಯಾಗಿ ಸರಕಾರ ಟ್ರಾಫಿಕ್ ಟಫ್ ರೂಲ್ಸ್ ಜಾರಿ ಮಾಡಿದೆ. ಕೋರ್ಟ್‌ ನಿರ್ದೇಶನದಂತೆ ಮೋಟಾರು ವಾಹನ ಕಾಯಿದೆ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮುಂದಾಗಿರುವ ಅಧಿಕಾರಿಗಳು ನಿಯಮ ಉಲ್ಲಂಘಿಸುವ ವಾಹನಗಳ ಮಾಲೀಕರಿಗೆ ದುಬಾರಿ ದಂಡ ವಿಧಿಸಲಿದ್ದಾರೆ.

ನಂಬರ್‌ ಪ್ಲೇಟ್‌ ಮೇಲೆ ನಾನಾ ರೀತಿಯ ಲಾಂಛನ, ಹುದ್ದೆಗಳ ಹೆಸರು ಬಳಕೆ, ಕರ್ಕಶ ಹಾರ್ನ್‌ ಹಾಕಿ ಶಬ್ಧ ಮಾಲಿನ್ಯ ಉಂಟು ಮಾಡುವ ವಾಹನ ಸವಾರರಿಗೆ ಹಾಗೂ ಮಾಲೀಕರಿಗೆ ಬಿಸಿ ಅಧಿಕಾರಿಗಳು ಬಿಸಿ ಮುಟ್ಟಿಸಲಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಶಬ್ಧ ಮಾಲಿನ್ಯ ಹಾಗೂ ನಂಬರ್‌ ಪ್ಲೇಟ್‌ ನಿಯಮ ಉಲ್ಲಂಘಿಸಿದ ಒಟ್ಟು 55,866 ವಾಹನ ಪರಿಶೀಲಿಸಿ, 638 ವಾಹನಗಳ ಮಾಲೀಕರಿಗೆ ದಂಡ ವಿಧಿಸಲಾಗಿದೆ.

ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ನಾನಾ ವಾಹನಗಳ ಶಬ್ಧಮಾಲಿನ್ಯ ಹಾಗೂ ನಂಬರ್‌ ಪ್ಲೇಟ್‌ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸ್ಥಳದಲ್ಲೇ ದಂಡ ವಿಧಿಸುತ್ತಿದ್ದಾರೆ. ಶಬ್ಧಮಾಲಿನ್ಯ ಉಂಟು ಮಾಡುವ ವಾಹನಕ್ಕೆ ಮೂರು ಸಾವಿರ ರೂ. ದಂಡ, ನಂಬರ್‌ ಪ್ಲೇಟ್‌ ಮೇಲೆ ಒಂದು ಅಕ್ಷರ ಅಥವಾ ಸಂಖ್ಯೆಗೆ 500 ರೂ. ದಂಡದಂತೆ, ಎಷ್ಟು ಅಕ್ಷರ, ವಿಭಿನ್ನ ವಿನ್ಯಾಸವಿರುತ್ತದೆಯೋ ಅಷ್ಟು ದಂಡ ವಿಧಿಸಲಾಗುತ್ತದೆ.

Join Whatsapp
Exit mobile version