Home ಕರಾವಳಿ ಪುತ್ತೂರು | ಹೊಳೆಗೆ ಕಾರು ಬಿದ್ದ ಪ್ರಕರಣ: ಇಬ್ಬರ ಮೃತದೇಹಗಳು ಪತ್ತೆ

ಪುತ್ತೂರು | ಹೊಳೆಗೆ ಕಾರು ಬಿದ್ದ ಪ್ರಕರಣ: ಇಬ್ಬರ ಮೃತದೇಹಗಳು ಪತ್ತೆ

ಪುತ್ತೂರು: ಬೈತ್ತಡ್ಕ ಬಳಿ ಹೊಳೆಗೆ ಕಾರು ಬಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಇಬ್ಬರು ಯುವಕರ ಮೃತದೇಹಗಳು ಇಂದು ಬೆಳಗ್ಗೆ ಪತ್ತೆಯಾಗಿವೆ.
ಕಾರು ಬಿದ್ದ ಜಾಗದಿಂದ ಕೆಳಗಡೆ ಸುಮಾರು 250 ಮೀ ದೂರದಲ್ಲಿ  ಎರಡು ಮೃತದೇಹಗಳು ಪತ್ತೆಯಾಗಿವೆ. ಸ್ಥಳೀಯರು ಮೊದಲು ಮೃತದೇಹಗಳನ್ನು ನೋಡಿದ್ದು, ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಬೈತಡ್ಕ ಸೇತುವೆಯಿಂದ 250 ಮೀಟರ್ ದೂರದ ಮರಕ್ಕಡ ಜೇಡರಕೇರಿ ಮಂಜಯ್ಯ ಆಚಾರ್ಯ ಎಂಬವರ ಮನೆಯ ಬಳಿ ಹೊಳೆಯಲ್ಲಿ ಮೃತದೇಹ ಒಂದು ಮೃತದೇಹ ಪತ್ತೆಯಾಗಿತ್ತು. ನಂತರದಲ್ಲಿ ಎರಡನೇ ಮೃತದೇಹ ಪತ್ತೆಯಾಗಿದೆ.

ಮೃತರನ್ನು ವಿಟ್ಲದ ಕುಂಡಡ್ಕ ನಿವಾಸಿ ಧನುಷ್ (26) ಹಾಗೂ ಮಂಜೇಶ್ವರ ನಿವಾಸಿ ಧನುಷ್ (21) ಎಂದು ಗುರುತಿಸಲಾಗಿದೆ.

ಶನಿವಾರ ತಡರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಕಾರು ಕಾಣಿಯೂರು ಸಮೀಪದ ಬೈತಡ್ಕ ಉಕ್ಕಿ ಹರಿಯುತ್ತಿರುವ ಹೊಳೆಗೆ  ಬಿದ್ದಿತ್ತು.

ಪುತ್ತೂರಿನಿಂದ ಕಾಣಿಯೂರು ಕಡೆ ತೆರಳುತ್ತಿದ್ದ ಅಪರಿಚಿತ ಕಾರು ತಡರಾತ್ರಿ ವೇಳೆಗೆ ಬೈತಡ್ಕ ಗೌರಿಹೊಳೆಗೆ ಬಿದ್ದಿದ್ದ  ದೃಶ್ಯವು ಬೈತಡ್ಕ ಜುಮಾ ಮಸೀದಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕಾರು ಯಾರದ್ದು, ಕಾರಿನಲ್ಲಿ ಎಷ್ಟು ಮಂದಿ ಇದ್ದರೆಂಬ ಬಗ್ಗೆ ಯಾವುದೇ ಮಾಹಿತಿ ದೊರೆತಿರಲಿಲ್ಲ. ಮರುದಿನ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು 200 ಮೀಟರ್ ದೂರದಲ್ಲಿ ಕಾರನ್ನು ಪತ್ತೆಹಚ್ಚಿ ಮೇಲಕ್ಕೆತ್ತಿದ್ದರು. ಇಂದು ಇಬ್ಬರ ಮೃತದೇಹ ಕೂಡ ಸಿಕ್ಕಿವೆ. ಇದರೊಂದಿಗೆ ಪ್ರಕರಣದ ಕುರಿತು ಉಂಟಾಗಿದ್ದ ಊಹಾಪೋಹಗಳಿಗೆ ತೆರೆಬಿದ್ದಿದೆ.

ಮೃತದೇಹವನ್ನು ನದಿಯಿಂದ ಮೇಲೆಕ್ಕೆತ್ತುವ ಕಾರ್ಯದಲ್ಲಿ ಅಗ್ನಿಶಾಮಕದಳ SDRF ಹಾಗೂ ಸ್ಥಳೀಯರೊಂದಿಗೆ  PFI ರಕ್ಷಣಾ ತಂಡದ ಸದಸ್ಯರು ಭಾಗಿಯಾಗಿದ್ದರು.

Join Whatsapp
Exit mobile version