ಬೆಂಗಳೂರು: ನೂತನ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರವನ್ನುವಹಿಸಿಕೊಂಡ ಪ್ರತಾಪ್ ರೆಡ್ಡಿ ಅವರು ಸರ್ಕಾರದ ಜೊತೆಗೆ ಮಾತನಾಡಿ ಮತ್ತೆ ಟೋಯಿಂಗ್ ಜಾರಿಗೆ ತರೋದಾಗಿ ಘೋಷಣೆ ಮಾಡಿದ್ದಾರೆ.
ನಗರದಲ್ಲಿ ಇಂದು ಬೆಂಗಳೂರು ನಗರ ಕಮೀಷನರ್ ಆಗಿ ಅಧಿಕಾರಿ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಪ್ರತಾಪ್ ರೆಡ್ಡಿ, ರಾಜ್ಯ ಸರ್ಕಾರದ ಜೊತೆಗೆ ಮಾತನಾಡಿ, ಶೀಘ್ರವೇ ನಗರದಲ್ಲಿ ಟೋಯಿಂಗ್ ಜಾರಿಗೆ ತರಲಾಗುತ್ತದೆ ಎಂದರು.
ನಗರದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡಿದ ಅವರು, ಪ್ರತಿಯೊಂದು ಠಾಣೆಯಲ್ಲಿಯೂ ಕನಿಷ್ಠ ನಾಲ್ಕು ಸಿಸಿಟಿವಿ ಇರಲೇ ಬೇಕು. ಯಾರೇ ಸಾರ್ವಜನಿಕರು ದೂರು ನೀಡಿದ್ರು, ದೂರು ದಾಖಲಿಸಲಬೇಕು ಎಂಬುದಾಗಿ ಖಡಕ್ ಸೂಚನೆ ನೀಡಿದರು. ಕೋವಿಡ್ ಕಡಿಮೆಯಾದ ಬಳಿಕ, ಬೆಂಗಳೂರಿನಲ್ಲಿ ವರ್ಕ್ ಫ್ರಂ ಹೋಂ ಕೊನೆಗೊಂಡಿದೆ. ಹೀಗಾಗಿ ವಾಹನಗಳ ಸಂಚಾರ ಹೆಚ್ಚಾಗಿದೆ. ಸಂಚಾರ ದಟ್ಟಣೆ ತಡೆಗಟ್ಟೋ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.