Home ಟಾಪ್ ಸುದ್ದಿಗಳು ಪಿಎಸ್ ಐ ನೇಮಕಾತಿ ಅಕ್ರಮ: ಮುಖ್ಯಪೇದೆ ಶ್ರೀಧರ್ ಬಳಿ 1.55 ಕೋಟಿ ರೂ. ಪತ್ತೆ

ಪಿಎಸ್ ಐ ನೇಮಕಾತಿ ಅಕ್ರಮ: ಮುಖ್ಯಪೇದೆ ಶ್ರೀಧರ್ ಬಳಿ 1.55 ಕೋಟಿ ರೂ. ಪತ್ತೆ

ಬೆಂಗಳೂರು: ಪಿಎಸ್ ಐ ನೇಮಕಾತಿ ಅಕ್ರಮದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ ಅಧಿಕಾರಿಗಳು, ನೇಮಕಾತಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯಪೇದೆ ಶ್ರೀಧರ್ ಮನೆಯಲ್ಲಿ ಬರೋಬ್ಬರಿ 1.55 ಕೋಟಿ ರೂ. ಹಣವಿರುವುದನ್ನು ಪತ್ತೆಹಚ್ಚಿದ್ದಾರೆ.
ಸಿಐಡಿ ಅಧಿಕಾರಿಗಳ ದಾಳಿ ವೇಳೆ ಕೆಲ ದಿನಗಳ ಹಿಂದೆ ಬಂಧಿತ ಅಧಿಕಾರಿಯೊಬ್ಬರ ಬಳಿ 20 ಲಕ್ಷ ಹಣ ಪತ್ತೆಯಾಗಿತ್ತು. ಮತ್ತೊಬ್ಬ ಬಂಧಿತನ ಮನೆ ಮೇಲಿನ ದಾಳಿಯಲ್ಲಿ 1.55 ಕೋಟಿ ಹಣ ಪತ್ತೆಯಾಗಿದ್ದು ಇದರಿಂದ ಭಾರೀ ಪ್ರಮಾಣದ ಅಕ್ರಮ ನಡೆಸಿರುವುದು ಸಾಬೀತಾಗಿದೆ.


ಪಿಎಸ್ ಐ ನೇಮಕಾತಿ ಹಗರಣದಲ್ಲಿ ಸಿಐಡಿ ಪೊಲೀಸರು, ಕಳೆದ ನಾಲ್ಕು ದಿನಗಳ ಹಿಂದೆ ಶ್ರೀಧರ್ ರನ್ನು ಬಂಧಿಸಿದ್ದರು. ಶ್ರೀಧರ್ ಡಿವೈಎಸ್ ಪಿ ಶಾಂತಕುಮಾರ್ ಆಣತಿಯಂತೆ ಕೆಲಸ ಮಾಡುತ್ತಿದ್ದರು. ಶಾಂತಕುಮಾರ್ ಕೂಡಾ ಬಂಧಿತರಾಗಿದ್ದಾರೆ.


32 ಮಂದಿ ವಿಚಾರಣೆ:
ಪಿಎಸ್ ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇಲ್ಲಿವರೆಗೆ 32 ಮಂದಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿ ಅವರ ವಿಚಾರಣೆಯನ್ನು ನಿನ್ನೆ ಪೂರ್ಣಗೊಳಿಸಿದ್ದಾರೆ. ಆರೋಪಿಗಳ ಪೈಕಿ ಯಾರೊಬ್ಬರಿಗೂ ಜಾಮೀನು ಸಿಗದ ಹಿನ್ನೆಲೆ 32 ಜನರಿಗೂ ಇದೀಗ ಜೈಲು ಭಾಗ್ಯ ಫಿಕ್ಸ್! ಆಗಿದೆ. ಎಲ್ಲರನ್ನು ಕಲಬುರಗಿ ಕೇಂದ್ರ ಕಾರಾಗೃಹಗೆ ಸಿಐಡಿ ಸಿಬ್ಬಂದಿ ಬಿಟ್ಟಿದ್ದು, ನಗರದ ಐವಾನ್ ಈ ಶಾಹಿ ಅತಿಥಿ ಗೃಹದಲ್ಲಿರುವ ಸಿಐಡಿ ಕಚೇರಿ, ಕಳೆದ ಒಂದು ತಿಂಗಳಿಂದ ಆರೋಪಿಗಳಿಂದ ತುಂಬಿ ಹೋಗಿತ್ತು. ತಿಂಗಳ ನಂತರ ಮೊದಲ ಬಾರಿಗೆ ಆರೋಪಿಗಳಿಲ್ಲದೆ ಸಿಐಡಿ ಕಚೇರಿ ಖಾಲಿಯಾಗಿದೆ. ಸದ್ಯ ಸಿಐಡಿ ಅಧಿಕಾರಿಗಳು ಎರಡನೇ ಹಂತದ ಕಾರ್ಯಾಚರಣೆಗೆ ಸಿದ್ದತೆ ನಡೆಸಿದ್ದಾರೆ.


ಶಾಂತಕುಮಾರ್ ಹಿಡಿತ:
ನೇಮಕಾತಿ ವಿಭಾಗದ ಡಿವೈಎಸ್ ಆಗಿ ಶಾಂತಕುಮಾರ್ ಕಾರ್ಯನಿರ್ವಹಿಸುತ್ತಿದ್ದರು. ಈ ಬಂಧನದೊಂದಿಗೆ ಎಡಿಜಿಪಿ ಅಮ್ರಿತ್ ಪಾಲ್ ಅವರನ್ನೂ ಮುಂದಿನ ದಿನಗಳಲ್ಲಿ ವಿಚಾರಣೆಗೆ ಒಳಪಡಿಸಬಹುದು.
ಸಿಬಿಐ ವಿಚಾರಣೆ ವೇಳೆ ಡಿವೈಎಸ್ಪಿ ಶಾಂತಕುಮಾರ್ ಮತ್ತಷ್ಟು ಸ್ಫೋಟಕ ಸತ್ಯಗಳನ್ನು ಬಾಯಿಬಿಡಬಹುದು ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನರನ್ನು ಸಿಐಡಿ ಬಂಧಿಸಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.

Join Whatsapp
Exit mobile version