Home ಟಾಪ್ ಸುದ್ದಿಗಳು ನಾಳೆ 68 ಸಾಧಕರು, 10 ಸಂಘ ಸಂಸ್ಥೆಗಳಿಗೆ ಪ್ರಶಸ್ತಿ

ನಾಳೆ 68 ಸಾಧಕರು, 10 ಸಂಘ ಸಂಸ್ಥೆಗಳಿಗೆ ಪ್ರಶಸ್ತಿ

ಬೆಂಗಳೂರು: ನಾಳೆ ರಾಜ್ಯಾದ್ಯಂತ 68ನೇ ಕರ್ನಾಟಕ ರಾಜ್ಯೋತ್ಸವ ನಡೆಯಲಿದೆ. ಆಚರಣೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ನಾಡಿನ ವಿವಿಧ ಸಾಧಕರನ್ನು ಗುರುತಿಸಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುವ ಪರಿಪಾಠದಂತೆ ಈ ಸಲವೂ ನಡೆಯಲಿದೆ.

2023ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ ಹೊರಬಿದ್ದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಗಂಡಗಿ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ, ಪ್ರಶಸ್ತಿ ವಿಜೇತರು ಮತ್ತು ಪ್ರಶಸ್ತಿ ವಿಜೇತ ಸಂಘ ಸಂಸ್ಥೆಗಳ ಹೆಸರನ್ನು ಬಿಡುಗಡೆ ಮಾಡಿದ್ದಾರೆ.

68ನೇ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಈ ಬಾರಿ ವಿವಿಧ ಸಾಧಕರು ಹಾಗೂ ಸಂಘಸಂಸ್ಥೆಗಳು ಸೇರಿ ಒಟ್ಟು 68 ಸಾಧಕರು, 10 ಸಂಘ ಸಂಸ್ಥೆಗಳಿಗೆ ಪ್ರಶಸ್ತಿ ನೀಡಲಾಗಿದೆ.

ಎಲ್ಲ ಜಿಲ್ಲೆಗಳಿಗೂ ಒಂದೊಂದು ಪ್ರಶಸ್ತಿ ನೀಡಿದ್ದೇವೆ. 10 ಸಂಘ ಸಂಸ್ಥೆಗಳಿಗೂ ಈ ಬಾರಿ ಪ್ರಶಸ್ತಿ ನೀಡಿದ್ದೇವೆ. ನೂರು ವರ್ಷ ದಾಟಿದವರು ಇಬ್ಬರು ರಾಜ್ಯೋತ್ಸವ ಪ್ರಶಸ್ತಿ ಪಡೆಯಲಿದ್ದಾರೆ, ಎಲ್ಲ ಕ್ಷೇತ್ರಗಳನ್ನು ನಾವು ಪರಿಗಣನೆ ಮಾಡಿದ್ದೇವೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.

ಸಂಗೀತ, ನೃತ್ಯ, ಚಲನಚಿತ್ರ, ರಂಗಭೂಮಿ, ಶಿಲ್ಪಕಲೆ, ಚಿತ್ರಕಲೆ, ಕರಕುಶಲ, ಯಕ್ಷಗಾನ, ಬಯಲಾಟ, ಜನಪದ, ಸಮಾಜಸೇವೆ, ಆಡಳಿತ, ವೈದ್ಯಕೀಯ, ಸಾಹಿತ್ಯ, ಶಿಕ್ಷಣ, ಕ್ರೀಡೆ, ನ್ಯಾಯಾಂಗ, ಪರಿಸರ, ಮಾಧ್ಯಮ, ವಿಜ್ಞಾನ ತಂತ್ರಜ್ಞಾನ, ಸ್ವಾತಂತ್ರ್ಯ ಹೋರಾಟಗಾರ, ಹೊರನಾಡು, ಗಡಿನಾಡು ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರು, ವಿವಿಧ ಸಂಘಟನೆಗಳನ್ನು ಗುರುತಿಸಿ ಈ ಬಾರಿ ಪ್ರಶಸ್ತಿಗೆ ಪರಿಗಣಿಸಗಲಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಶಾಲೆಗೆ ಎರಡು ಎಕರೆ ಸ್ವಂತ ಜಾಗ ನೀಡಿದ್ದ ಹುಚ್ಚಮ್ಮ, ರಾಮನಗರ ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪುಟ್ಟಸ್ವಾಮಿಗೌಡ, ನ್ಯಾಯಾಂಗ ಕ್ಷೇತ್ರದಿಂದ ಜಸ್ಟೀಸ್ ವಿ. ಗೋಪಾಲಗೌಡ, ಇಸ್ರೋ ಚೇರ್ಮನ್ ಎಸ್ ಸೋಮನಾಥ್, ಸಿನಿಮಾ ಕ್ಷೇತ್ರದಿಂದ ಹಿರಿಯ ಪೋಷಕ ನಟರಾದ ಡಿಂಗ್ರಿ ನಾಗರಾಜ್ ಹಾಗೂ ಬ್ಯಾಂಕ್ ಜನಾರ್ಧನ್ ಹೀಗೆ 12 ಮಹಿಳೆಯರು, ಒಬ್ಬರು ಮಂಗಳಮುಖಿ ಸೇರಿದಂತೆ ಹಲವರಿಗೆ ಈ ಬಾರಿ ರಾಜ್ಯೊತ್ಸವ ಪ್ರಶಸ್ತಿ ಸಿಗಲಿದೆ.

Join Whatsapp
Exit mobile version