Home ಟಾಪ್ ಸುದ್ದಿಗಳು ಮೀಸಲಾತಿ ಸಮಸ್ಯೆ ಪರಿಹಾರಕ್ಕೆ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಿ: ಉದ್ಧವ್‌ ಠಾಕ್ರೆ

ಮೀಸಲಾತಿ ಸಮಸ್ಯೆ ಪರಿಹಾರಕ್ಕೆ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಿ: ಉದ್ಧವ್‌ ಠಾಕ್ರೆ

ಮುಂಬೈ: ರಾಜ್ಯದಿಂದ ಆಯ್ಕೆಯಾದ ಕೇಂದ್ರ ಸಚಿವರು ಮರಾಠ ಮೀಸಲಾತಿ ಬಗ್ಗೆ ಕೇಂದ್ರ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಬೇಕು. ಸಂಸತ್ತಿನ ವಿಶೇಷ ಅಧಿವೇಶನ ಕರೆಯುವ ಮೂಲಕ ಮರಾಠ ಮೀಸಲಾತಿ ಸಮಸ್ಯೆಯನ್ನು ಪರಿಹರಿಸಬೇಕಲು ನೋಡಬೇಕು. ಇದು ಆಗುವುದಿಲ್ಲವಾದರೆ ಅವರೆಲ್ಲರೂ ರಾಜೀನಾಮೆ ನೀಡಲಿ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಹೇಳಿದ್ದಾರೆ.

ಈ ಸಮಸ್ಯೆಯನ್ನು ಕೇಂದ್ರ ಸರ್ಕಾರವೇ ಪರಿಹರಿಸಬೇಕು. ಲೋಕಸಭೆಯಲ್ಲಿ ಮಾತ್ರ ಈ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯ. ಈ ಹಿಂದೆಯು ಇದನ್ನೇ ಹೇಳಿದ್ದೆ. ಈಗಲೂ ಇದನ್ನೇ ಹೇಳುತ್ತಿದ್ದೇನೆ. ಕೇಂದ್ರ ಸರ್ಕಾರ ವಿಶೇಷ ಅಧಿವೇಶ ಕರೆಯುವ ಮೂಲಕ ಸಮಸ್ಯೆಗೆ ಪರಿಹಾರ ನೀಡಬೇಕು. ಅಗತ್ಯಬಿದ್ದರೆ ವಿಧಾನಸಭೆ ವಿಶೇಷ ಅಧಿವೇಶವನ್ನು ಕರೆಯಲಿ ಎಂದು ಅವರು ಹೇಳಿದರು.

‘ಲಮರಾಠ ಮೀಸಲಾತಿ ಹೋರಾಟದ ಕಾವು ಹೆಚ್ಚಿದ್ದು, ರಾಜ್ಯದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದ ಕೆಲವಡೆ ಹಿಂಸಾಚಾರವೂ ನಡೆಯುತ್ತಿದೆ. ಮರಾಠ ಮೀಸಲಾತಿ ಬೆಂಬಲಿಗರು ಕೆಲ ರಾಜಕಾರಣಿಗಳ ನಿವಾಸ ಮತ್ತು ಕಚೇರಿಗಳನ್ನು ಧ್ವಂಸ ಮಾಡುತ್ತಿದ್ದಾರೆ. ಮೀಸಲಾತಿ ವಿಚಾರದಲ್ಲಿ ಪರಿಹಾರ ಕಂಡುಕೊಳ್ಳಬೇಕಾದ ತುರ್ತು ಅಗತ್ಯವಿದೆ ಎಂದು ಠಾಕ್ರೆ ತಿಳಿಸಿದರು.

Join Whatsapp
Exit mobile version