Home ಟಾಪ್ ಸುದ್ದಿಗಳು ಹುಲಿ ದಾಳಿ: ಮರದಡಿ ಕುಳಿತಿದ್ದ ಬಾಲಕ ಬಲಿ

ಹುಲಿ ದಾಳಿ: ಮರದಡಿ ಕುಳಿತಿದ್ದ ಬಾಲಕ ಬಲಿ

ಮೈಸೂರು: ಮೈಸೂರಲ್ಲಿ ಮತ್ತೆ ಹುಲಿ ದಾಳಿ ಮುಂದುವರಿದಿದ್ದು, 7 ವರ್ಷದ ಬಾಲಕನೊಬ್ಬ ಬಲಿಯಾಗಿದ್ದಾನೆ.


ಚರಣ್ ನಾಯಕ್ (7) ಮೃತ ಬಾಲಕ.


ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನ ಕಲ್ಲಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.


ಚರಣ್ ನಾಯಕ್ ಪೋಷಕರೊಂದಿಗೆ ಜಮೀನಿಗೆ ತೆರಳಿದ್ದ. ಜಮೀನಿನಲ್ಲಿ ಆಟ ಆಡುತ್ತಾ ಸುಸ್ತಾದ ಚರಣ್ ಮರದ ಕೆಳಗೆ ಕುಳಿತಿದ್ದ. ಮರದಡಿ ಕುಳಿತಿದ್ದ ಬಾಲಕನ ಮೇಲೆ ಒಮ್ಮೆಲೆ ಎರಗಿದ ಹುಲಿಯು ದಾಳಿ ಮಾಡಿ. ಜಮೀನಿನಿಂದ ದೂರ ಎಳೆದೊಯ್ದ ಹುಲಿಯು ತಿಂದು ಕೊಂದು ಹಾಕಿದೆ.


ಎಚ್.ಡಿ.ಕೋಟೆ ತಾಲೂಕಿನಲ್ಲಿ ಬಾಲಕನನ್ನು ಹುಲಿಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ನರಭಕ್ಷಕ ಹುಲಿ ಸೆರೆಗೆ ಅರಣ್ಯ ಅಧಿಕಾರಿಗಳು ಮುಂದಾಗಿದ್ದಾರೆ. ಹುಲಿ ಸೆರೆ ಕಾರ್ಯಾಚರಣೆಗೆ ಎರಡು ಆನೆಗಳ ಬಳಕೆ ಮಾಡಲಾಗುತ್ತಿದ್ದು, ದುಬಾರೆ ಕ್ಯಾಂಪ್ನಿಂದ ಸುಗ್ರೀವ ಹಾಗೂ ಪ್ರಶಾಂತ್ ಹೆಸರಿನ ಆನೆಯನ್ನು ಕರೆಸುತ್ತಿದ್ದಾರೆ.

Join Whatsapp
Exit mobile version