Home ಟಾಪ್ ಸುದ್ದಿಗಳು ಏರ್ ಇಂಡಿಯಾ ಗಗನಸಖಿ ಭೀಕರ ಕೊಲೆ

ಏರ್ ಇಂಡಿಯಾ ಗಗನಸಖಿ ಭೀಕರ ಕೊಲೆ

ಮುಂಬೈ: ಗಗನಸಖಿ ಒಬ್ಬರನ್ನು ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ.


ಛತ್ತೀಸ್ ಗಢ ಮೂಲದ 24 ವರ್ಷದ ರೂಪಾಲ್ ಓಗ್ರೆ ಕೊಲೆಯಾದ ದುರ್ದೈವಿ.


ಮುಂಬೈನ ಅಂದೇರಿಯ ಟಾಟಾ ಶಕ್ತಿ ಕೇಂದ್ರದ ಮರೋಳ್ ನ ಎನ್ ಜಿ ಕಾಂಪ್ಲೆಕ್ಸ್ ನಲ್ಲಿ ಸೋಮವಾರ ರಾತ್ರಿ ರೂಪಾಲ್ ಕೊಲೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಆರೋಪದ ಮೇಲೆ ರೂಪಾಲ್ ಉಳಿದುಕೊಂಡಿದ್ದ ಅಪಾರ್ಟ್ಮೆಂಟ್ ನ ಸ್ವಚ್ಚತಾ ಕೆಲಸಗಾರ 40 ವರ್ಷದ ವಿಕ್ರಮ್ ಅತ್ವಾಲ್ ಎಂಬುವವನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Join Whatsapp
Exit mobile version