Home ಟಾಪ್ ಸುದ್ದಿಗಳು ಭಾರೀ ಮಳೆ: ಪುತ್ತೂರು ಜಲಾವೃತ, ಬಂಟ್ವಾಳದಲ್ಲಿ ಸಿಡಿಲು ಬಡಿದು ಮೂವರಿಗೆ ಗಾಯ

ಭಾರೀ ಮಳೆ: ಪುತ್ತೂರು ಜಲಾವೃತ, ಬಂಟ್ವಾಳದಲ್ಲಿ ಸಿಡಿಲು ಬಡಿದು ಮೂವರಿಗೆ ಗಾಯ

ಮಂಗಳೂರು: ಗುಡುಗು ಸಹಿತ ಭಾರೀ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರ ಜಲಾವೃತಗೊಂಡಿದೆ.


ಮಳೆಯ ಆರ್ಭಟಕ್ಕೆ ಪುತ್ತೂರಿನ ದರ್ಬೆಯಲ್ಲಿ ಅಂಗಡಿ-ಮುಂಗಟ್ಟುಗಳಿಗೆ ನೀರು ನುಗ್ಗಿದೆ. ಅಲ್ಲದೇ ಕೋರ್ಟ್ ರೋಡ್ ಬಳಿಯ ಜ್ಯುವೆಲ್ಲರಿ ಅಂಗಡಿಯೊಂದು ಜಲಾವೃತಗೊಂಡಿದೆ. ಇನ್ನು ಭಾರೀ ಮಳೆಗೆ ರಸ್ತೆಗಳು ನದಿಯಂತಾದವು. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆಯಲ್ಲೇ ನೀರು ನಿಂತಿದೆ. ಹೀಗಾಗಿ ರಸ್ತೆಯಲ್ಲಿ ನೀರು ಹೆಚ್ಚಾಗಿ ಪಕ್ಕದ ಅಂಗಡಿ ಮುಂಗಟ್ಟುಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.


ಬಂಟ್ವಾಳದ ಕೊಡಂಬೆಟ್ಟು ಗ್ರಾಮದಲ್ಲಿ ತೋಟದಲ್ಲಿ ಹುಲ್ಲು ಕೊಯ್ಯಲು ಹೋಗಿದ್ದ ಮೂವರು ಮಹಿಳೆಯರು ಸಿಡಿಲು ಬಡಿದ ಗಾಯಗೊಂಡಿದ್ದಾರೆ. ಇಲ್ಲಿನ ಸುಬ್ಬೊಟ್ಟು ನಿವಾಸಿಯಾದ ಅನಿತಾ ಪೂಜಾರಿ(38) ಮತ್ತು ರಾಮಯ್ಯ ಗುರಿ ನಿವಾಸಿ ಸಹೋದರಿಯರಾದ ಲೀಲಾವತಿ(32) ಹಾಗೂ ಮೋಹಿನಿ(30) ಗಾಯಗೊಂಡವರು.ಇವರು ಸಹಿತ ಒಟ್ಟು ಏಳುಮಂದಿ ಮಹಿಳೆಯರು ತೋಟದಲ್ಲಿ ಹುಲ್ಲು ಕೊಯ್ಯುತ್ತಿದ್ದ ವೇಳೆ ಸಿಡಿಲು ಬಡಿದಿದ್ದು, ಮೂವರಿಗೆ ಗಾಯಗಳಾಗಿದೆ. ತಕ್ಷಣವೇ ಇವರನ್ನು 108 ಅಂಬ್ಯುಲೆನ್ಸ್ ನೆರವಿನಲ್ಲಿ ಬಂಟ್ವಾಳ ತಾಲೂಕು ಆಸ್ಪತ್ರೆಗೆ ಕರೆತಂದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp
Exit mobile version