Home ಟಾಪ್ ಸುದ್ದಿಗಳು ಇಸ್ಮಾಯಿಲ್ ತಮಟಗಾರಗೆ ಪರಿಷತ್ ಟಿಕೆಟ್ ಮಿಸ್: ರಾಜೀನಾಮೆ ನೀಡಿದ ಹುಬ್ಬಳ್ಳಿ-ಧಾರವಾಡ ಪಾಲಿಕೆ ಸದಸ್ಯೆ

ಇಸ್ಮಾಯಿಲ್ ತಮಟಗಾರಗೆ ಪರಿಷತ್ ಟಿಕೆಟ್ ಮಿಸ್: ರಾಜೀನಾಮೆ ನೀಡಿದ ಹುಬ್ಬಳ್ಳಿ-ಧಾರವಾಡ ಪಾಲಿಕೆ ಸದಸ್ಯೆ

ಹುಬ್ಬಳ್ಳಿ: ವಿಧಾನ ಪರಿಷತ್ ಟಿಕೆಟ್ ವಿಚಾರವಾಗಿ ಧಾರವಾಡ ಜಿಲ್ಲಾ ಕಾಂಗ್ರೆಸ್ ನಲ್ಲಿ ಭಿನ್ನಮತ ಉಂಟಾಗಿದೆ.


ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಇಸ್ಮಾಯಿಲ್ ತಮಟಗಾರ ವಿಧಾನ ಪರಿಷತ್ ಟಿಕೆಟ್ ನೀಡದ ಹಿನ್ನಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಇಸ್ಮಾಯಿಲ್ ತಮಟಗಾರಗೆ ಪರಿಷತ್ ಟಿಕೆಟ್ ನೀಡದ್ದಕ್ಕೆ ಹುಬ್ಬಳ್ಳಿ-ಧಾರವಾಡ ಪಾಲಿಕೆ ವಾರ್ಡ್ ನಂ.6ರ ಸದಸ್ಯೆ ದಿಲ್ ಶಾದ ಬೇಗಂ ನಧಾಪ ರಾಜೀನಾಮೆ ನೀಡಿದ್ದಾರೆ.

ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ್ ಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ವಿಧಾನ ಪರಿಷತ್ ಟಿಕೆಟ್ ನೀಡುವ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಅನ್ಯಾಯ ಮಾಡಿದೆ. ಧಾರವಾಡ ಜಿಲ್ಲೆಯ ವಿಚಾರವಾಗಿ ಕಾಂಗ್ರೆಸ್ ತಗೆದುಕೊಂಡಿರುವ ತೀರ್ಮಾನಕ್ಕೆ ಮನನೊಂದು ರಾಜೀನಾಮೆ ನೀಡಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Join Whatsapp
Exit mobile version