ಬೆಂಗಳೂರು : ಗೃಹ ಸಚಿವ ಆರಗ ಜ್ಞಾನೇಂದ್ರ ಸೋಮವಾರ ವಿಧಾನ ಪರಿಷತ್ತಿನಲ್ಲಿ ತಮ್ಮ ಇಲಾಖೆಗೆ ಸಂಬಂಧಿಸಿದ ಎರಡು ತಿದ್ದುಪಡಿ ಮಸೂದೆಗಳು ಸೇರಿದಂತೆ ಮೂರು ಪ್ರಮುಖ ವಿಧೇಯಕಗಳಿಗೆ, ಸದನದ ಒಪ್ಪಿಗೆ ಪಡೆದರು.
ನ್ಯಾಯಾಲಯದಲ್ಲಿ ಸಾಕ್ಷಿಯ ಸಾಕ್ಷ್ಯವನ್ನು ಶ್ರವ್ಯ, ದೃಶ್ಯ ವಿದ್ಯುನ್ಮಾನ ವಿಧಾನಗಳ ಮೂಲಕ ದಾಖಲಿಸುವ ಪ್ರಕ್ರಿಯೆಗೆ, ದಂಡ ಪ್ರಕ್ರಿಯಾ ಸಂಹಿತೆ ( ಕರ್ನಾಟಕ ತಿದ್ದುಪಡಿ) ವಿಧೇಯಕ 2021, ಬಂದಿ ಗಳ ಗುರುತಿಸುವಿಕೆ ( ತಿದ್ದುಪಡಿ ವಿಧೇಯಕ) 2021 ಮತ್ತು ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ 2021, ಗಳಿಗೆ, ಚರ್ಚೆಗಳ ಮೂಲಕ ಸದನದ ಅನುಮತಿ ಪಡೆದುಕೊಳ್ಳಲಾಯಿತು.
ಇದಕ್ಕೂ ಮುನ್ನ ಈ ಮೂರು ವಿಧೇಯಕ ಗಳು ವಿಧಾನ ಸಭೆಯಲ್ಲಿ, ಚರ್ಚಿತವಾಗಿ ಅನುಮೋದನೆ ಹೊಂದಿದ್ದವು. ಈ ಎಲ್ಲಾ ಮಸೂದೆಗಳನ್ನು ಸದನದ ಸದಸ್ಯರು ಒಮ್ಮತದಿಂದ ಒಪ್ಪಿಗೆ ನೀಡಿದ್ದಕ್ಕೆ, ಸಚಿವರು, ತಮ್ಮ ಧನ್ಯವಾದ ಸಲ್ಲಿಸಿದರು.