Home ಟಾಪ್ ಸುದ್ದಿಗಳು ತುಮಕೂರಿನಲ್ಲಿ ನವಿಲು ಮಾಂಸ ಮಾಡಿಟ್ಟಿದ್ದ ಮೂವರ ಬಂಧನ

ತುಮಕೂರಿನಲ್ಲಿ ನವಿಲು ಮಾಂಸ ಮಾಡಿಟ್ಟಿದ್ದ ಮೂವರ ಬಂಧನ

ತುಮಕೂರು: ಹುಲಿ ಉಗುರು ರಾಜ್ಯದಲ್ಲಿ ಸುದ್ದಿ ಮಾಡುತ್ತಿರುವಾಗಲೇ ರಾಷ್ಟ್ರ ಪಕ್ಷಿ ನವಿಲು ಸುದ್ದಿ ಮಾಡುತ್ತಿದೆ‌. ರಾಷ್ಟ್ರಪಕ್ಷಿ ನವಿಲು ಮಾಂಸ ಭಕ್ಷಣೆಗೆ ಮುಂದಾಗಿದ್ದ ಮೂವರನ್ನು ತುಮಕೂರಿನಲ್ಲಿ ಬಂಧಿಸಲಾಗಿದೆ. ಬಿಟ್ಟಿಂಗ್ ನಾಯಕ್, ಬೈಷಾಕ್ ದಾವು, ದುಬಾ ಕಾಪತ್ ಬಂಧಿತರು. ತುಮಕೂರಿನ ಮಾರನಾಯಕನಪಾಳ್ಯದಲ್ಲಿ ತುಮಕೂರು ವಲಯ ಅರಣ್ಯಾಧಿಕಾರಿ ಪವಿತ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ಬಂಧಿತರು ಓರಿಸ್ಸಾ ಮೂಲದವರು. ಮಾರನಾಯಕನಪಾಳ್ಯದ ಇಟ್ಟಿಗೆ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು. ಕಳೆದ ಹಲವು ದಿನಗಳಿಂದ ನವಿಲುಗಳನ್ನ ಕೊಂದು ಭಕ್ಷಿಸುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದು ಮೂವರನ್ನು ಬಂಧಿಸಿದ್ದಾರೆ.

ಈ ವೇಳೆ 1.5 ಕೆಜಿ ನವಿಲಿನ ಹಸಿ ಮಾಂಸ, ನವಿಲಿನ ಎರಡು ಕಾಲುಗಳು, ಬೇಯಿಸಿದ ಮಾಂಸ, ನವಿಲು ಹಿಡಿಯಲು ಬಳಸಿದ್ದ ಬಲೆಗಳು, ಉರುಳುಗಳು, ಮಾಂಸ ಬೇಯಿಸಿದ್ದ ಪಾತ್ರೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಮಾಂಸವನ್ನ ಎಫ್‌ಎಸ್‌ಎಲ್ ಗೆ ಕಳುಹಿಸಲಾಗುತ್ತೆ. ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Join Whatsapp
Exit mobile version