Home ರಾಜ್ಯ ಭಡ್ತಿ ಪಡೆಯಲು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಸಿಕ್ಕಿಬಿದ್ದ ಶಾಸಕರ ಪತ್ನಿ!

ಭಡ್ತಿ ಪಡೆಯಲು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಸಿಕ್ಕಿಬಿದ್ದ ಶಾಸಕರ ಪತ್ನಿ!

ಬೆಂಗಳೂರು: ಶಾಸಕರೆಂದರೆ ಶಾಸನ ವಿಧಿಸುವ ಅಧಿಕಾರ ಇರೋರು. ಸಚಿವರಾಗಿ ಕಾನೂನು ಸುವ್ಯವಸ್ಥೆ ನೋಡಿಕೊಳ್ಳೋರು. ಅಂತಹ ಜವಾಬ್ದಾರಿಯುತ ಸ್ಥಾನದಲ್ಲಿದ್ದವರ ವಿದ್ಯಾವಂತ ಪತ್ನಿಯೇ ಗಂಡನ ಸಹಕಾರದೊಂದಿಗೆ ತುಂಬಾ ಕೆಳಮಟ್ಟದ ಮತ್ತು ಅಪರಾಧವಾದ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಸಿಕ್ಕಿ ಬಿದ್ದಿರುವ ಹೇಯ ಘಟನೆ ಇದಾಗಿದೆ.

ನೆಲಮಂಗಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಾ. ಸುಜಾ ಕೆ. ಶ್ರೀಧರ್‌ ಎನ್ನುವರು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಸಿಕ್ಕಿಬಿದ್ದಿದ್ದಾರೆ.

ಡಾ. ಸುಜಾ ಕೆ. ಶ್ರೀಧರ್ ಪರಿಶಿಷ್ಟ ಜಾತಿಯ ದ್ರಾವಿಡ ಜಾತಿಯ ಸುಳ್ಳು ಪ್ರಮಾಣ ಪತ್ರ ಪಡೆದು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ಪಡೆದುಕೊಂಡಿದ್ದರು. ಇದೇ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಜಿ.ಎನ್‌. ಶಕುಂತಲಾ ಅವರಿಗೆ ದೊರೆತಿದ್ದ ಭಡ್ತಿಗೆ ಮಾಜಿ ಶಾಸಕರು ತಮ್ಮ ರಾಜಕೀಯ ಪ್ರಭಾವ ಬಳಸಿ ತಮ್ಮ ಪತ್ನಿ ಡಾ. ಸುಜಾ ಕೆ.ಶ್ರೀಧರ್ ಅವರಿಗೆ ಕೊಡಿಸಿದ್ದರು.

ಈ ಬಗ್ಗೆ ನ್ಯಾಯ ಕೊಡಿಸಬೇಕೆಂದು ಇದೇ ಕಾಲೇಜು ಉಪನ್ಯಾಸಕಿ ಡಾ. ಶಕುಂತಲಾ, ಸುಳ್ಳು ಪ್ರಮಾಣ ಪತ್ರ ನೀಡಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಅಧೀಕ್ಷಕ ಎಚ್.ಡಿ. ಆನಂದ್ ಕುಮಾರ್‌ ಅವರಿಗೆ ದೂರು ನೀಡಿದ್ದಾರೆ.

ತ್ಯಾಮಗೊಂಡ್ಲು ಹೋಬಳಿಯ ಓಬಳಾಪುರದ ಮಾಜಿ ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಪತ್ನಿ ಸುಜಾ ಕೆ. ಶ್ರೀಧರ್‌ ಕೇರಳ ಮೂಲದವರು. ಸದ್ಯ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕಿ. ಕೇರಳದ ಎಳವ ಜಾತಿಗೆ ಸೇರಿದ್ದು, ತಂದೆಯ ಜಾತಿ ಮಾತ್ರ ಮಗಳಿಗೆ ಬರುತ್ತದೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Join Whatsapp
Exit mobile version