Home ಟಾಪ್ ಸುದ್ದಿಗಳು ಸ್ವಂತ ಬಿಸಿನೆಸ್ ಆರಂಭಿಸುವವರಿಗೆ ಸಿಗಲಿದೆ 20 ಲಕ್ಷ ರೂ.; ಬಜೆಟ್’ನಲ್ಲಿ ಘೋಷಣೆ

ಸ್ವಂತ ಬಿಸಿನೆಸ್ ಆರಂಭಿಸುವವರಿಗೆ ಸಿಗಲಿದೆ 20 ಲಕ್ಷ ರೂ.; ಬಜೆಟ್’ನಲ್ಲಿ ಘೋಷಣೆ

ನವದೆಹಲಿ: ಸ್ವಂತ ವ್ಯವಹಾರ ಆರಂಭಿಸುವ ಕನಸು ಕಂಡಿದ್ದವರಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಣಕಾಸಿನ ಸಹಾಯದ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ.

ಮುದ್ರಾ ಯೋಜನೆಯಡಿ ನೀಡಲಾಗುತ್ತಿದ್ದ ಮೊತ್ತವನ್ನು 10 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳಿಗೆ ಏರಿಕೆ ಮಾಡಿ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.

ಸ್ವಂತ ಉದ್ಯೋಗ ಅಥವಾ ವ್ಯವಹಾರ ಆರಂಭಕ್ಕೆ ಎನ್ ಡಿ ಎ ಸರ್ಕಾರ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಾಲದ ಮೊತ್ತದ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ.

ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ ಯುವ ಸಮುದಾಯಕ್ಕೆ 20 ಲಕ್ಷ ರೂ.ವರೆಗೆ ಸಾಲ ಸಿಗಲಿದೆ. ಈ ಮೊದಲು ಮುದ್ರಾ ಯೋಜನೆಯಡಿ ಗರಿಷ್ಠ 10 ಲಕ್ಷ ರೂ.ವರೆಗೆ ಮಾತ್ರ ಹಣಕಾಸಿನ ನೆರವನ್ನು ನೀಡಲಾಗುತ್ತಿತ್ತು.


2015ರಲ್ಲಿ ಕೇಂದ್ರ ಸರ್ಕಾರ ಮುದ್ರಾ ಯೋಜನೆಯನ್ನು ಜಾರಿಗೆ ತಂದಿತ್ತು. ಕಳೆದ 9 ವರ್ಷಗಳಲ್ಲಿ 40 ಕೋಟಿಗೂ ಅಧಿಕ ಜನರು ಈ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ.

Join Whatsapp
Exit mobile version