Home ಟಾಪ್ ಸುದ್ದಿಗಳು ಬೂಸ್ಟರ್ ಡೋಸ್ ಪಡೆದವರು ನೇಸಲ್ ಲಸಿಕೆ ಪಡೆಯುವಂತಿಲ್ಲ : NTAGI  ಮುಖ್ಯಸ್ಥ

ಬೂಸ್ಟರ್ ಡೋಸ್ ಪಡೆದವರು ನೇಸಲ್ ಲಸಿಕೆ ಪಡೆಯುವಂತಿಲ್ಲ : NTAGI  ಮುಖ್ಯಸ್ಥ

ನವದೆಹಲಿ: ಈಗಾಗಲೇ ಕೋವಿಡ್ -19 ಲಸಿಕೆಯ ಬೂಸ್ಟರ್ ಡೋಸ್ ಪಡೆದವರು ಭಾರತ್ ಬಯೋಟೆಕ್ ನ ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆ ಪಡೆಯುವಂತಿಲ್ಲ ಎಂದು ಭಾರತದ ಕೊರೋನಾವೈರಸ್ ಟಾಸ್ಕ್ ಫೋರ್ಸ್ ಗ್ರೂಪ್ ನ್ಯಾಷನಲ್ ಟೆಸ್ಟಿಂಗ್ ಅಡ್ವೈಸರಿ ಗ್ರೂಪ್ (ಎನ್ ಟಿಎಜಿಐ) ಮುಖ್ಯಸ್ಥ ಡಾ.ಎನ್.ಕೆ.ಅರೋರಾ ಹೇಳಿದ್ದಾರೆ.

ಇನ್ ಕೊವ್ಯಾಕ್ (iNCOVACC) ಲಸಿಕೆಯನ್ನು ಕಳೆದ ವಾರ ಕೋವಿನ್ ಪ್ಲಾಟ್ ಫಾರಂನಲ್ಲಿ ಪರಿಚಯಿಸಲಾಗಿತ್ತು. ಇದನ್ನು ಬೂಸ್ಟರ್ ಡೋಸ್ ಆಗಿ ಶಿಫಾರಸ್ಸು ಮಾಡಲಾಗಿದೆ. ಆದರೆ ಒಬ್ಬ ವ್ಯಕ್ತಿ ಈಗಾಗಲೇ ಮುಂಜಾಗ್ರತಾ ಡೋಸ್ ಪಡೆದಿದ್ದಲ್ಲಿ, ಮೂಗಿನ ಮೂಲಕ ನೀಡುವ ಡೋಸನ್ನು ಅವರಿಗೆ ಶಿಫಾರಸ್ಸು ಮಾಡಲಾಗದು ಎಂದು ಅರೋರಾ ಮಾಧ್ಯಮವೊಂದರ ವಿಶೇಷ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

ಒಬ್ಬ ವ್ಯಕ್ತಿ ನಾಲ್ಕನೇ ಡೋಸ್ ಪಡೆಯಲು ಬಯಸುತ್ತಾರೆ ಎಂದಿಟ್ಟುಕೊಳ್ಳೋಣ. ಒಬ್ಬ ವ್ಯಕ್ತಿಗೆ ಪದೇ ಪದೇ ನಿರ್ದಿಷ್ಟ ಬಗೆಯ ಆ್ಯಂಟಿಜೆನ್ ಪ್ರತಿರೋಧ ಲಸಿಕೆ ನೀಡಿದಲ್ಲಿ ದೇಹದಲ್ಲಿ ಆಂಟಿಜೆನ್ ಸಿಂಕ್ ಎಂದು ಕರೆಯಲ್ಪಡುವ ವಿದ್ಯಮಾನವು ಪ್ರಾರಂಭವಾಗುತ್ತದೆ. ಇದರಿಂದ ದೇಹವು ಅದಕ್ಕೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸುತ್ತದೆ ಅಥವಾ ಕಳಪೆಯಾಗಿ ಪ್ರತಿಕ್ರಿಯಿಸುತ್ತದೆ. ಆದ್ದರಿಂದ ಆರಂಭದಲ್ಲಿ ಎಂಆರ್ ಎನ್ಎ ಲಸಿಕೆಗಳನ್ನು ಆರು ತಿಂಗಳ ಅಂತರದಲ್ಲಿ ನೀಡಲಾಗಿತ್ತು. ಬಳಿಕ ಜನ ಮೂರು ತಿಂಗಳ ಅಂತರದಲ್ಲಿ ಪಡೆದಿದ್ದಾರೆ. ಆದರೆ ಅದು ಇಂಥ ಪ್ರಕರಣಗಳಲ್ಲಿ ಭಾರಿ ಪ್ರಯೋಜನವಾಗಿದೆ. ಆದ್ದರಿಂದ ತಕ್ಷಣಕ್ಕೆ ನಾಲ್ಕನೇ ಡೋಸ್ ಪಡೆಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅವರು ಹೇಳೀದ್ದಾರೆ.

Join Whatsapp
Exit mobile version