Home ಟಾಪ್ ಸುದ್ದಿಗಳು ‘ಮುಸ್ಲಿಮರು ಈ ದೇಶದಲ್ಲಿ ಹುಟ್ಟಿದವರಲ್ಲ’: ವಿವಾದಾತ್ಮಕ ಹೇಳಿಕೆ ನೀಡಿದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮಿ

‘ಮುಸ್ಲಿಮರು ಈ ದೇಶದಲ್ಲಿ ಹುಟ್ಟಿದವರಲ್ಲ’: ವಿವಾದಾತ್ಮಕ ಹೇಳಿಕೆ ನೀಡಿದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮಿ

ಬೆಂಗಳೂರು: ಖಾಸಗಿ ಮಾಧ್ಯಮವೊಂದರ ಚರ್ಚಾ ಕಾರ್ಯಕ್ರಮದಲ್ಲಿ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮಿ ಮುಸ್ಲಿಮರ ಬಗ್ಗೆ ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೆ ಒಳಗಾಗಿದ್ದು, ಅವರ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.


“ಮುಸ್ಲಿಮರು ಈ ದೇಶದಲ್ಲಿ ಹುಟ್ಟಿವದರಲ್ಲ, ಅವರಿಗೆ ಅಲ್ಪಸಂಖ್ಯಾತರೆಂದು ಪರಿಗಣಿಸಿ ಮೀಸಲಾತಿ ನೀಡಲಾಗಿದೆ” ಎಂದು ಜಯಮೃತ್ಯುಂಜಯ ಶ್ರೀ ಖಾಸಗಿ ಸುದ್ದಿವಾಹಿನಿಯಲ್ಲಿ ಹೇಳಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಪಂಚಮಸಾಲಿ ಮೀಸಲಾತಿಯನ್ನು ಸಂಬಂಧಿಸಿ ಚರ್ಚೆಯಲ್ಲಿ ಭಾಗವಹಿಸಿದ ಜಯಮೃತ್ಯುಂಜಯ ಶ್ರೀ, “ನಮ್ಮ ದೇಶದಲ್ಲಿ ಹುಟ್ಟಿಲ್ಲದ ಮುಸ್ಲಿಮರಿಗೆ ಧಾರ್ಮಿಕ ಅಲ್ಪಸಂಖ್ಯಾತ ಮೀಸಲಾತಿ ನೀಡಲಾಗಿದೆ. ಕ್ರಿಶ್ಚಿಯನ್ ಅವರಿಗೆ ಕೊಟ್ಟಿದ್ದೇವೆ, ನಮಗೆ ಯಾಕೆ ಕೊಡಬಾರದು” ಎಂದು ಪ್ರಶ್ನಿಸಿದ್ದು, ಹಲವು ಪ್ರಗತಿಪರರ ಸಂಘಟನೆಗಳು ಶ್ರೀಗಳ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿವೆ.

Join Whatsapp
Exit mobile version