Home ಟಾಪ್ ಸುದ್ದಿಗಳು ಮಧ್ಯಂತರ ತೀರ್ಪಿಗೆ ಮುನ್ನ ಗೈರಾದವರಿಗೆ ಪರೀಕ್ಷೆ ಬರೆಯಲು ಅವಕಾಶ

ಮಧ್ಯಂತರ ತೀರ್ಪಿಗೆ ಮುನ್ನ ಗೈರಾದವರಿಗೆ ಪರೀಕ್ಷೆ ಬರೆಯಲು ಅವಕಾಶ

ಬೆಂಗಳೂರು: ಹಿಜಾಬ್‌ ವಿವಾದದ ವೇಳೆ  ಹೈಕೋರ್ಟ್‌ನ ಮಧ್ಯಂತರ ತೀರ್ಪು ಬರುವ ಮುನ್ನ ಪರೀಕ್ಷೆಗಳಿಗೆ ಹಾಜ ರಾಗದ ವಿದ್ಯಾರ್ಥಿಗಳಿಗೆ ಹಿಜಾಬ್‌ ಧರಿಸದೇ ಪರೀಕ್ಷೆ ಬರೆಯಲು ಅವಕಾಶ ನೀಡುವ ಕುರಿತು ಪರಿಶೀಲನೆ ನಡೆಸಲಾಗುವುದು. ಮಧ್ಯಂತರ ಆದೇಶದ ನಂತರ ಪರೀಕ್ಷೆ ತಪ್ಪಿಸಿ ಕೊಂಡವರಿಗೆ ಮರು ಅವಕಾಶ  ಸಾಧ್ಯವಿಲ್ಲ  ಎಂದು ಕಾನೂನು ಮತ್ತು ಸಂಸ ದೀಯ ವ್ಯವಹಾರ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.

 ಹಿಜಾಬ್‌ ವಿವಾದದ ವೇಳೆ ಕೆಲವರಿಗೆ ಪರೀಕ್ಷೆ ಬರೆಯಲಾಗಲಿಲ್ಲ. ಈಗ ಹಿಜಾಬ್‌ ತೆಗೆದು ಪರೀಕ್ಷೆ ಬರೆಯಲು ಸಿದ್ಧರಾಗಿರುವವರಿಗೆ ಅವಕಾಶ ಕಲ್ಪಿಸಬೇಕು. ಹೈಕೋರ್ಟ್‌ ಆದೇಶ ಬಂದ ನಂತರವೂ ಪಾಲಿಸದೇ ಗೊಂದಲ ಸೃಷ್ಟಿಸಲು ಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳ ಬೇಕು ಎಂದು ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕ ರಘುಪತಿ ಭಟ್‌ ಆಗ್ರಹಿಸಿದರು.

ಹೈಕೋರ್ಟ್‌ ಆದೇಶ ನೀಡಿದರೂ ಅದನ್ನು ಖಂಡಿಸಿ ಬಂದ್‌ ಮಾಡುವುದು, ಪ್ರತಿಭಟನೆ ನಡೆಸುವುದು ಸರಿಯಲ್ಲ. ಕೋರ್ಟ್‌ ಆದೇಶಕ್ಕೆ ಬೆಲೆ ಕೊಡದವರು ಮತ್ತೆ ಯಾರಿಗೆ ಬೆಲೆ ಕೊಡುತ್ತಾರೆ ಎಂದು ಬಿಜೆಪಿ ಶಾಸಕ ಜಗದೀಶ್‌ ಶೆಟ್ಟರ್‌ ಪ್ರಶ್ನಿಸಿದರು. ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಹೈಕೋರ್ಟ್‌ ತೀರ್ಪಿನ ಬಗ್ಗೆ ಅಸಮಾಧಾನ ಇದ್ದರೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಜತೆಗೆ ಶಾಂತಿಯುತ ಬಂದ್‌, ಪ್ರತಿಭಟನೆ ಮಾಡುವುದು ಕೂಡ ಸಂವಿಧಾನಾತ್ಮಕ ಹಕ್ಕು ಎಂದು ಹೇಳಿದರು.

Join Whatsapp
Exit mobile version