Home ಟಾಪ್ ಸುದ್ದಿಗಳು ಈ ಚುನಾವಣೆ ಮಣಿಪುರವನ್ನು ಒಡೆಯುವ ಶಕ್ತಿಗಳ ಮತ್ತು ರಕ್ಷಿಸುವ ಶಕ್ತಿಗಳ ನಡುವಿನ ಯುದ್ಧ: ಅಮಿತ್ ಶಾ

ಈ ಚುನಾವಣೆ ಮಣಿಪುರವನ್ನು ಒಡೆಯುವ ಶಕ್ತಿಗಳ ಮತ್ತು ರಕ್ಷಿಸುವ ಶಕ್ತಿಗಳ ನಡುವಿನ ಯುದ್ಧ: ಅಮಿತ್ ಶಾ

ಇಂಫಾಲ್: ಈ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಸ್ಪರ್ಧೆ ಖಂಡಿತಾ ಅಲ್ಲ,ಮಣಿಪುರವನ್ನು ಒಡೆಯುವ ವಿಭಜಕ ಶಕ್ತಿಗಳು ಮತ್ತು ಮಣಿಪುರ ರಾಜ್ಯವನ್ನು ರಕ್ಷಿಸುವ ಶಕ್ತಿಗಳ ನಡುವಿನ ಯುದ್ಧ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ.

ಕಳೆದ 1 ವರ್ಷದಿಂದ ನಾಗರಿಕ ಹಿಂಸಾಚಾರಗಳಿಂದ ನಲುಗುತ್ತಿರುವ ಮಣಿಪುರಕ್ಕೆ ಈ ವರ್ಷ ಮೊದಲ ಭೇಟಿ ಇಂಫಾಲ್​ನಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಯಾರು ಎಷ್ಟೇ ಪ್ರಯತ್ನಿಸಿದರೂ ಮಣಿಪುರವನ್ನು ಒಡೆಯಲು ನಾವು ಬಿಡುವುದಿಲ್ಲ ಎಂದರು.

ಕಳೆದ 10 ವರ್ಷಗಳಲ್ಲಿ, ಮೋದಿ ಜಿ ಭಾರತವನ್ನು ಸಮೃದ್ಧಗೊಳಿಸಿದ್ದು ಮಾತ್ರವಲ್ಲದೆ ಭಾರತದ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸಿದ್ದಾರೆ. ಕಳೆದ 75 ವರ್ಷ ಕಾಲ ಉಗ್ರ ಮತ್ತು ನಕ್ಸಲ್ ಶಕ್ತಿಗಳಿಂದ ನಲುಗಿದ್ದ ಈಶಾನ್ಯ ಪ್ರದೇಶದಲ್ಲಿ ನರೇಂದ್ರ ಮೋದಿ ಅವರು ಶಾಂತಿ ಮತ್ತು ಸಹಭಾಳ್ವೆಯ ವಾತಾವರಣ ತಂದಿದ್ದಾರೆ ಎಂದರು.

Join Whatsapp
Exit mobile version