ಒಡಿಶಾ: ಒಡಿಶಾದ ಜಜ್ಪುರ್ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಕೋಲ್ಕತ್ತಾಗೆ ತೆರಳುತ್ತಿದ್ದ ಬಸ್ ಸೇತುವೆಯಿಂದ ಬಿದ್ದ ದುರಂತ ನಡೆದಿದೆ. ಈ ದುರಂತದಿಂದ ಐದು ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುರಿಯಿಂದ ಕೋಲ್ಕತ್ತಾಗೆ 40 ಪ್ರಯಾಣಿಕರನ್ನು ಹೊತ್ತ ಬಸ್ ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ -16 ರ ಬಾರಾಬತಿ ಸೇತುವೆಯಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ಕೆಳಗೆ ಉರುಳಿ ಬಿದ್ದು ಈ ಭೀಕರ ದುರಂತ ಸಂಭವಿಸಿದೆ.
ಮೃತರಲ್ಲಿ ಓರ್ವ ಮಹಿಳೆ ಸೇರಿದ್ದು, ಮಕ್ಕಳು, ಹಿರಿಯರು ಗಾಯಗೊಂಡ ದುರಂತಕ್ಕೆ ಜನಸಾಗರ ನೆರೆದಿದ್ದು, ರೋದನ ಮುಗಿಳು ಮುಟ್ಟಿದೆ.