Home ಟಾಪ್ ಸುದ್ದಿಗಳು ಇಡಿಯಿಂದ ರಾಹುಲ್ ಗಾಂಧೀಗೆ ಮೂರನೇ ಸಮನ್ಸ್

ಇಡಿಯಿಂದ ರಾಹುಲ್ ಗಾಂಧೀಗೆ ಮೂರನೇ ಸಮನ್ಸ್

ನವದೆಹಲಿ: ಕಾರ್ಯಕರ್ತರ ಪ್ರತಿಭಟನೆ ಮತ್ತು ಬಂಧನದ ನಡುವೆ, ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ನಿನ್ನೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯ ಎರಡನೇ ದಿನದ ವಿಚಾರಣೆ ಮುಗಿಸಿದೆ ಮತ್ತು ಇಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಮೂರನೇ ಸಮನ್ಸ್ ವಿಧಿಸಿದೆ.

11.30 ರಿಂದ ಪ್ರಾರಂಭವಾದ ಇಡಿ ವಿಚಾರಣೆ, ಮಧ್ಯಾಹ್ನ 3.30 ರ ಸಮಯ್ಕ್ಕೆ ಒಂದು ಗಂಟೆಯ ವಿರಾಮದ ನಂತರ ತಡರಾತ್ರಿವರೆಗೆ ಸರಿಸುಮಾರು 11 ಗಂಟೆಗಳ ಕಾಲ ನಡೆದಿತ್ತು.

ಇಂದು ಮತ್ತೆ ವಿಚಾರಣೆಗೆ ಭಾಗಿಯಾಗಬೇಕೆಂದು ಇಡಿ ರಾಹುಲ್ ಗೆ ಸಮನ್ಸ್ ವಿಧಿಸಿದ್ದು ಕಾಂಗ್ರೆಸ್ ನಾಯಕರ ಪ್ರತಿಭಟನೆ ಇಂದೂ ಮುಂದುವರಿಯುವಂತೆ ಕಾಣುತ್ತಿದೆ.

Join Whatsapp
Exit mobile version