Home ಟಾಪ್ ಸುದ್ದಿಗಳು ತೃತೀಯ ರಂಗದ ಮುಂಚೂಣಿ ನಾಯಕ ಮುಲಾಯಂ ಸಿಂಗ್ ಯಾದವ್ ನಿಧನ: ಎಸ್ ಡಿಪಿಐ ತೀವ್ರ ಸಂತಾಪ

ತೃತೀಯ ರಂಗದ ಮುಂಚೂಣಿ ನಾಯಕ ಮುಲಾಯಂ ಸಿಂಗ್ ಯಾದವ್ ನಿಧನ: ಎಸ್ ಡಿಪಿಐ ತೀವ್ರ ಸಂತಾಪ

ಬೆಂಗಳೂರು: ಸಮಾಜವಾದಿ ಪಕ್ಷದ ಸಂಸ್ಥಾಪಕ ಮತ್ತು ಉತ್ತರ ಪ್ರದೇಶದಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್ ಯಾದವ್ ಅವರ ನಿಧನಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ತೃತೀಯ ರಂಗ ಅಸ್ತಿತ್ವಕ್ಕೆ ಬರಲು ಮತ್ತು ಅಧಿಕಾರಕ್ಕೆ ಏರಲು ಮುಲಾಯಂ ಸಿಂಗ್ ಯಾದವ್ ಅವರ ಬಹುಮುಖ್ಯ ಪಾತ್ರವಿತ್ತು. ಮಂಡಲ್ ವರದಿ ಜಾರಿಯಲ್ಲಿ ಕೂಡ ಮುಖ್ಯ ಪಾತ್ರ ನಿರ್ವಹಿಸಿದ್ದ ಅವರು ಆ ಮೂಲಕ ದೇಶದ ಹಿಂದುಳಿದ ವರ್ಗಗಳಿಗೆ ಸಂವಿಧಾನಾತ್ಮಕವಾಗಿ ಮೀಸಲಾತಿಯ ದೊಡ್ಡ ಭಾಗವನ್ನು ಒದಗಿಸಿಕೊಡುವಲ್ಲಿ ಅವರ ಕೊಡುಗೆಯೂ ಇದೆ. ಇದರಿಂದ ಲಾಲು ಯಾದವ್ ರಂತಹ ಹಿಂದುಳಿದ ವರ್ಗಗಳ ನಾಯಕರು ಮತ್ತು ಮಾಯಾವತಿ ಯಂತಹ ದಲಿತ ವರ್ಗದ ನಾಯಕಿ ಮುಂಚೂಣಿಗೆ ಬರಲು ಪ್ರೇರಕರಾದರು ಎಂದು ಅವರು ಸ್ಮರಿಸಿದ್ದಾರೆ.

ಶಾಲಾ ದಿನಗಳಲ್ಲಿ ದಲಿತ ಸಹಪಾಠಿಯ ಮೇಲೆ ಮೇಲ್ಜಾತಿ ಹುಡುಗರಿಂದ ಹಲ್ಲೆಯಾದಾಗ ಅದಕ್ಕೆ ಪ್ರತಿರೋಧ ಒಡ್ಡಿ ತಮ್ಮದೇ ಮೇಲ್ಜಾತಿ ಸ್ನೇಹಿತರನ್ನು ಜೈಲಿಗೆ ಕಳಿಸಿದ್ದನ್ನು ಇಂದಿಗೂ ಅವರ ಗೆಳೆಯರು ನೆನೆಯುತ್ತಾರೆ. ಅದೇ ಜಾತ್ಯತೀತ ತತ್ವಗಳನ್ನು ಮುಂದುವರಿಸಿಕೊಂಡು ಹೋದ ಅವರು 1990ರಲ್ಲಿ ಬಾಬರಿ ಮಸೀದಿ ಕೆಡಲು ಸಂಘಪರಿವಾರ ನಡೆಸಿದ ಮೊದಲ ಪ್ರಯತ್ನವನ್ನು ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಲೆಕ್ಕಿಸದೆ ಗೋಲಿಬಾರಿಗೆ ಆದೇಶ ನೀಡಿ ವಿಫಲಗೊಳಿಸಿದ್ದರು. ಅವರ ಆ ಜಾತ್ಯತೀತ ನಡೆ ದೇಶದ ಈಗಿನ ಸಂದರ್ಭಕ್ಕೆ ಅಗತ್ಯವಾಗಿದೆ ಎಂದು ಅಬ್ದುಲ್ ಮಜೀದ್ ಮೈಸೂರು ಅವರು ಅವರ ರಾಜಕೀಯ ನಿಲುವುಗಳ ಬಗ್ಗೆ ವಿವರಿಸಿದರು. ಹತ್ತು ಬಾರಿ ಶಾಸಕ, ಏಳು ಬಾರಿ ಸಂಸದ, ಮೂರು ಬಾರಿ ಮುಖ್ಯಮಂತ್ರಿಯ ಜೊತೆಗೆ ದೇಶದ ರಕ್ಷಣಾ ಸಚಿವರಾಗಿಯೂ ಸೇವಿ ಸಲ್ಲಿಸಿದ್ದ ಅವರ ನಿಧನದೊಂದಿಗೆ ದೇಶದ ರಾಜಕೀಯ ಇತಿಹಾಸದಿಂದ ಪ್ರಶಂಸಾರ್ಹ ವ್ಯಕ್ತಿತ್ವವೊಂದು ಮರೆಯಾಗಿದೆ ಎಂದು ಅಬ್ದುಲ್ ಮಜಿದ್ ವಿಷಾದ ವ್ಯಕ್ತಪಡಿಸಿದರು.

Join Whatsapp
Exit mobile version