Home ಟಾಪ್ ಸುದ್ದಿಗಳು ದೇಶದಲ್ಲಿ ನಿಜವಾದ ಅಲ್ಪಸಂಖ್ಯಾತರು ಮುಸ್ಲಿಮರಲ್ಲ, ಬ್ರಾಹ್ಮಣರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ದೇಶದಲ್ಲಿ ನಿಜವಾದ ಅಲ್ಪಸಂಖ್ಯಾತರು ಮುಸ್ಲಿಮರಲ್ಲ, ಬ್ರಾಹ್ಮಣರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಮೀಸಲಾತಿ ಸೌಲಭ್ಯದಿಂದ ಮುಸ್ಲಿಮರನ್ನು ತೆಗೆದುಹಾಕಬೇಕು ಎಂದ ಬಿಜೆಪಿ ಶಾಸಕ


ವಿಜಯಪುರ: ದೇಶದಲ್ಲಿ ನಿಜವಾದ ಅಲ್ಪಸಂಖ್ಯಾತರು ಮುಸ್ಲಿಮರಲ್ಲ, ಬ್ರಾಹ್ಮಣರು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಾಹ್ಮಣ ಸಮುದಾಯದವರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗಬೇಕು. ಜನಸಂಖ್ಯೆಯಲ್ಲಿ ಬ್ರಾಹ್ಮಣರು ಕೇವಲ ಶೇಕಡಾ 2ರಿಂದ 3ರಷ್ಟಿದ್ದಾರೆ. ದೇಶದಲ್ಲಿ ನಿಜವಾದ ಅಲ್ಪಸಂಖ್ಯಾತ ಸಮುದಾಯ ಅಂದರೆ ಬ್ರಾಹ್ಮಣರು. ಅಲ್ಪಸಂಖ್ಯಾತ ಪಟ್ಟಿಯಲ್ಲಿ ಬ್ರಾಹ್ಮಣರನ್ನು ಸೇರಿಸಬೇಕು. ಮುಸ್ಲಿಂ ಸಮುದಾಯದವರು ಅಲ್ಪಸಂಖ್ಯಾತರು ಅಲ್ಲವೇ ಅಲ್ಲ. ಒಂದು ಜನಾಂಗದಷ್ಟಿರುವ ಮುಸ್ಲಿಮರು ಹೇಗೆ ಅಲ್ಪಸಂಖ್ಯಾತರಾಗುತ್ತಾರೆ ಎಂದು ಪ್ರಶ್ನಿಸಿದರು.


ಅಲ್ಪಸಂಖ್ಯಾತ ಹಾಗೂ 2ಬಿ ಎರಡೆರಡು ಮೀಸಲಾತಿ ಲಾಭವನ್ನು ಮುಸ್ಲಿಂ ಸಮುದಾಯದವರು ಪಡೆಯುತ್ತಿದ್ದಾರೆ. 2ಬಿ ಮೀಸಲಾತಿಯಿಂದ ತೆಗೆದುಹಾಕಲು ಎಲ್ಲ ತಯಾರಿ ನಡೆದಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಗಂಭೀರ ಚಿಂತನೆ ನಡೆಯುತ್ತಿದೆ ಎಂದು ಹೇಳಿದರು.

Join Whatsapp
Exit mobile version