ಶ್ರೀಮಂತರಿಂದ ಕದ್ದು ಬಡವರಿಗೆ ದಾನ ಮಾಡುತಿದ್ದ ಕಳ್ಳ ಅರೆಸ್ಟ್

Prasthutha|

ಬೆಂಗಳೂರು: ಶ್ರೀಮಂತರ ಮನೆಯಿಂದ ಕದ್ದು ಬಡವರಿಗೆ ದಾನ ಮಾಡುತ್ತಿದ್ದ ಕದೀಮನನ್ನು ಬೆಂಗಳೂರಿನ ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

- Advertisement -

ಜಾನ್ ಮೆಲ್ವಿನ್ ಅಲಿಯಾಸ್ ಮಾಡರ್ನ ರಾಬಿನ್ವುಡ್ ಬಂಧಿತ ವ್ಯಕ್ತಿ. 1990 ರಿಂದಲೇ ಕಳ್ಳತನ ವೃತ್ತಿ ಮಾಡ್ಕೊಂಡಿದ್ದ ಈತನ ಮೇಲೆ 50ಕ್ಕೂ ಹೆಚ್ಚು ಕೇಸುಗಳು ದಾಖಲಾಗಿವೆ.

ಕದ್ದ ಹಣದಲ್ಲಿ ಸ್ವಲ್ಪ ಹಣವನ್ನು ದೇವಸ್ಥಾನ ಮತ್ತು ಚರ್ಚ್ ಗಳ ಹುಂಡಿಗೆ ಮತ್ತು ಭಿಕ್ಷುಕರಿಗೆ ನೀಡುತ್ತಿದ್ದ ಎನ್ನಲಾಗಿದೆ. ಮಡಿವಾಳ ಲಿಮಿಟ್ಸ್ ನಲ್ಲಿ ಕಾಂಟ್ರ್ಯಾಕ್ಟರ್ ಒಬ್ಬರ ಮನೆಗೆ ಕನ್ನ ಹಾಕಿ 8 ಲಕ್ಷ ನಗದು 2 ಲಕ್ಷದ ಚಿನ್ನಾಭರಣ ದೋಚಿದ್ದ. ಈತನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

Join Whatsapp
Exit mobile version