Home ಟಾಪ್ ಸುದ್ದಿಗಳು ಪಿಎಸ್ ಐ ಅಕ್ರಮ ನೇಮಕಾತಿ ಪ್ರಕರಣ | ಎಬಿವಿಪಿ ಕೈವಾಡದ ಬಗ್ಗೆ ಕೂಲಂಕಷ ತನಿಖೆಯಾಗಲಿ: ಕ್ಯಾಂಪಸ್...

ಪಿಎಸ್ ಐ ಅಕ್ರಮ ನೇಮಕಾತಿ ಪ್ರಕರಣ | ಎಬಿವಿಪಿ ಕೈವಾಡದ ಬಗ್ಗೆ ಕೂಲಂಕಷ ತನಿಖೆಯಾಗಲಿ: ಕ್ಯಾಂಪಸ್ ಫ್ರಂಟ್

ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣದಲ್ಲಿ ಇದೀಗಾಗಲೇ ಬಂಧಿತರ ಸಂಖ್ಯೆ ಏಳಕ್ಕೆ ಏರಿದ್ದು, ಇದರಲ್ಲಿ ಎಬಿವಿಪಿ ಗುಲ್ಬರ್ಗ ಜಿಲ್ಲಾಧ್ಯಕ್ಷ ಸೇರಿ ಹಲವಾರು ಬಿಜೆಪಿ, ಎಬಿವಿಪಿ ಮುಖಂಡರನ್ನು ಬಂಧಿಸಲಾಗಿದೆ. ಈ ಹಗರಣದಲ್ಲಿ ಎಬಿವಿಪಿ ಸಂಘಟನೆಯ ನೇರ ಭಾಗಿದಾರಿಕೆ ಎದ್ದು ಕಾಣುತ್ತಿದ್ದು, ಇದರ ಬಗ್ಗೆ ಕೂಲಂಕಷ ತನಿಖೆಯಾಗಬೇಕೆಂದು ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಆಗ್ರಹಿಸಿದೆ.


ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯವರು ಈ ಹಗರಣದ ನೇರ ಸೂತ್ರಧಾರಿಯೆಂಬುದು ಪ್ರಾಥಮಿಕ ತನಿಖೆಯ ಮೂಲಕ ಬಯಲಾಗಿದೆ. ಪಿಎಸ್ ಐ ನೇಮಕಾತಿಯ ಸೀಟು ಹಂಚಿಕೆಯಲ್ಲಿ ಎಬಿವಿಪಿಗೆ ಮೀಸಲಿಡುವಂತಹ ಪ್ರಕ್ರಿಯೆ ನಡೆಯುತ್ತಿದೆಯೋ ಎಂಬ ಸಂಶಯ ಮೂಡುತ್ತಿದೆ. ಬಿಜೆಪಿ ಸರಕಾರದ ಆಡಳಿತದಲ್ಲಿ ಹಗರಣಗಳು ಹೆಚ್ಚುತ್ತಿದ್ದು ಮುಂದುವರೆದ ಭಾಗವಾಗಿ ಇದೀಗ ಪಿಎಸ್ ಐ ನೇಮಕಾತಿಯಲ್ಲಿ ಪಾರದರ್ಶಕತೆಯಾಗಿ ಪರೀಕ್ಷೆ ನಡೆಯದೆ ಹಗರಣ ನಡೆದಿದೆ.

ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಹಾಗೂ ದೇಶಕ್ಕೆ ಸೇವೆ ಸಲ್ಲಿಸುವಂತಹ ಇಂತಹ ಹುದ್ದೆಗಳಲ್ಲಿ ಇಂತಹ ಅಕ್ರಮಗಳನ್ನು ನಡೆಸುವ ಮೂಲಕ ದೇಶಕ್ಕೆ ದ್ರೋಹ ಬಗೆಯುವಂತಹ ಎಬಿವಿಪಿಯಂತಹ ಸಂಘಟನೆಗಳ ಮೇಲೆ ತೀವ್ರ ನಿಗಾ ಇಡಬೇಕೆಂದು ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಅಡ್ವೊಕೇಟ್ ರೋಶನ್ ನವಾಝ್ ಆಗ್ರಹಿಸಿದ್ದಾರೆ.

Join Whatsapp
Exit mobile version