Home ಟಾಪ್ ಸುದ್ದಿಗಳು ದೆಹಲಿಯ 100ಕ್ಕೂ ಅಧಿಕ ಶಾಲೆಗಳಿಗೆ ಬಾಂಬ್ ಬೆದರಿಕೆ

ದೆಹಲಿಯ 100ಕ್ಕೂ ಅಧಿಕ ಶಾಲೆಗಳಿಗೆ ಬಾಂಬ್ ಬೆದರಿಕೆ

ದೆಹಲಿ ಮತ್ತು ನೋಯ್ಡಾದ 100ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದ್ದು, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳವು ದೌಡಾಯಿಸಿದೆ.

ಸದ್ಯ ಶಾಲೆಗಳಲ್ಲಿ ಶೋಧ ನಡೆಸಲಾಗುತ್ತಿದೆ. ಭದ್ರತೆಯ ದೃಷ್ಟಿಯಿಂದ ಶಾಲಾ ಮಕ್ಕಳನ್ನು ಮನೆಗೆ ವಾಪಸ್ ಕಳುಹಿಸಲಾಗಿದೆ.


ಮಾಹಿತಿಯ ಪ್ರಕಾರ, ದೆಹಲಿ-ಎನ್ಸಿಆರ್ ಸೇರಿದಂತೆ ಸುಮಾರು 100 ಶಾಲೆಗಳಿಗೆ ಬೆದರಿಕೆ ಇಮೇಲ್ ಗಳನ್ನು ಕಳುಹಿಸಲಾಗಿದೆ. ಎಲ್ಲೆಡೆ ಒಂದೇ ಇಮೇಲ್ ಕಳುಹಿಸಲಾಗಿದೆ. ದೆಹಲಿಯ 60ಕ್ಕೂ ಹೆಚ್ಚು ಶಾಲೆಗಳಿಂದ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಬಾಂಬ್ ಕರೆಗಳು ಬಂದಿದ್ದವು. ಆದರೆ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿ ಈ ಸಂಖ್ಯೆ 40 ರ ಆಸುಪಾಸಿನಲ್ಲಿದೆ. ಎಲ್ಲಿಯೂ ಅನುಮಾನಾಸ್ಪದವಾದ ಏನೂ ಪತ್ತೆಯಾಗಿಲ್ಲ.

Join Whatsapp
Exit mobile version