Home ಟಾಪ್ ಸುದ್ದಿಗಳು ಹಸುವಿನ ಹಾಲಿನಲ್ಲಿ ಚಿನ್ನವಿದೆ: ಪ. ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್

ಹಸುವಿನ ಹಾಲಿನಲ್ಲಿ ಚಿನ್ನವಿದೆ: ಪ. ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್

ಕೊಲ್ಕತಾ: ಪ್ಯಾಕೆಟ್ ಹಾಲು ಕುಡಿಯುವವರಿಗೆ ನಾಟಿ ದನದ ಹಾಲಲ್ಲಿರುವ ಚಿನ್ನದ ಗುಣ ಲಭಿಸುವುದಿಲ್ಲ ಎಂದು ಬಿಜೆಪಿ ಬಂಗಾಳ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.


ನಾನು ಈ ಹಿಂದೆಯೂ ದನದ ಹಾಲಿನಲ್ಲಿ ಚಿನ್ನವಿದೆ ಎಂದಿದ್ದೆ, ಅಂದು ಎಲ್ಲರೂ ತಮಾಷೆ ಮಾಡಿದರು . ಆದರೆ ಜನರು ನೈಜ ಹಾಲು ಕುಡಿಯುವುದಿಲ್ಲ. ಪ್ಯಾಕೆಟ್ ಹಾಲು ಕುಡಿಯುತ್ತಾರೆ. ಅದರಿಂದ ಚಿನ್ನ ಸಿಕ್ಕೀತೇ? ಬಂಗಾಳದ ಜನರು ದನದ ಹಾಲು ಕುಡಿಯುವುದನ್ನೇ ಬಿಟ್ಟಿದ್ದಾರೆ. ಅವರಿಗೆ ಹಾಲಿನ ಚಾ ಇಷ್ಟ ಎಂದು ದಿಲೀಪ್ ಘೋಷ್ ಹೇಳಿದರು.


ಕೊಲ್ಕತಾದಲ್ಲಿ ಜಾನುವಾರು ಸಾಕಣೆ ಅಷ್ಟಾಗಿ ಇಲ್ಲ. ದನವನ್ನು ಮನೆಯಲ್ಲಿ ಸಾಕುವುದರ ಅಗತ್ಯ ಜನರಿಗೆ ಅರ್ಥವಾಗಿಲ್ಲ. ಇಂದು ಎಲ್ಲರೂ ಪ್ಯಾಕೆಟ್ ಹಾಲನ್ನೇ ಕುಡಿಯುವುದು. ಅದು ನಿಜವಾದ ಹಾಲಲ್ಲ ಎಂದು ಅವರು ರೈತ ವಿಂಗ್ ಸಭೆಯಲ್ಲಿ ಹೇಳಿದರು.

Join Whatsapp
Exit mobile version