Home ಅಂಕಣಗಳು ನಂತರ ಅವರು ನನ್ನನ್ನೇ ಹುಡುಕಿ ಬಂದರು….

ನಂತರ ಅವರು ನನ್ನನ್ನೇ ಹುಡುಕಿ ಬಂದರು….

✍️ ಶಿವಸುಂದರ್

ಪಾಸ್ಟರ್ ನೆಮ್ಯೂಲರ್ ನ ಪಾಪ ನಿವೇದನೆಯಿಂದ ಭಾರತೀಯರೇನಾದರೂ ಕಲಿಯುವುದಿದೆಯೇ?

ಮೊದಲವರು
ಕಮ್ಯುನಿಸ್ಟರನ್ನು
ಹುಡುಕಿ ಬಂದರು

ನಾನು ಸುಮ್ಮನಿದ್ದೆ

ಏಕೆಂದರೆ
ನಾನು ಕಮ್ಯುನಿಸ್ಟ್ ಆಗಿರಲಿಲ್ಲ ..

ನಂತರ ಅವರು
ಟ್ರೇಡ್ ಯೂನಿಯನಿಷ್ಠರನ್ನು
ಹುಡುಕಿ ಬಂದರು

ನಾನು ಸುಮ್ಮನಿದ್ದೆ

ಏಕೆಂದರೆ
ನಾನು ಟ್ರೇಡ್ ಯೂನಿಯನಿಸ್ಟ್ ಆಗಿರಲಿಲ್ಲ ..

ನಂತರ ಅವರು
ಯೆಹೂದಿಗಳನ್ನು
ಹುಡುಕಿ ಬಂದರು

ನಾನು ಸುಮ್ಮನಿದ್ದೆ

ಏಕೆಂದರೆ
ನಾನು ಯೆಹೂದಿಯಾಗಿರಲಿಲ್ಲ.

ನಂತರ ಅವರು
ಕೆಥೊಲಿಕರನ್ನು
ಹುಡುಕಿ ಬಂದರು

ನಾನು ಸುಮ್ಮನಿದ್ದೆ

ಏಕೆಂದರೆ
ನಾನು ಕೆಥೊಲಿಕನಾಗಿರಲಿಲ್ಲ

ಕೊನೆಗೆ ಅವರು
ನನ್ನನ್ನೇ
ಹುಡುಕಿ ಬಂದರು

ಆಗ ನನಗಾಗಿ
ಧ್ವನಿ ಎತ್ತುವವರು
ಯಾರೂ ಇರಲಿಲ್ಲ………

  • – ಪಾಸ್ಟರ್ ಮಾರ್ಟಿನ್ ನೆಮ್ಯೂಲರ್

ಇದು ಜರ್ಮನಿನ ಪಾದ್ರಿ ಮಾರ್ಟಿನ್ ನೆಮ್ಯೂಲರ್ ಹಿಟ್ಲರ್ ನ Concentration Camp ನಿಂದ ಸೋವಿಯತ್ ಮಿತ್ರಪಡೆಗಳು ಬಿಡುಗಡೆ ಮಾಡಿದ ನಂತರ ಮಾಡಿದ ಭಾಷಣದ ಸಾರಾಂಶ ರೂಪ .
ಪ್ರೊಟೆಸ್ಟಂಟ್ ಪಾದ್ರಿಯಾಗಿದ್ದ ಮಾರ್ಟಿನ್ ನೆಮ್ಯೂಲರ್ 1934 ರಲ್ಲಿ ಹಿಟ್ಲರ್ ಅಧಿಕಾರ ವಶಪಡಿಸಿಕೊಂಡಿದ್ದನ್ನು ಸಂಭ್ರಮಿಸಿದವರಲ್ಲಿ ಒಬ್ಬನಾಗಿದ್ದ.
ಅಧಿಕಾರ ವಹಿಸಿಕೊಂಡ ಪ್ರಾರಂಭದಲ್ಲಿ ಹಿಟ್ಲರ್ ನ ಪಡೆಗಳು ಕಮ್ಯುನಿಸ್ಟರ ಕಗ್ಗೊಲೆಯನ್ನು ನಡೆಸುತ್ತಿದ್ದಾಗ ದೈವದ್ರೋಹಿ ಕಮ್ಯುನಿಸ್ಟರನ್ನು ಕೊಂದು ಹಿಟ್ಲರ್ ಒಳ್ಳೆಯ ಕೆಲಸ ಮಾಡುತ್ತಿದ್ದಾನೆ ಎಂದು ಸಂಭ್ರಮಿಸಿದ್ದವರಲ್ಲಿ ಇವರೂ ಒಬ್ಬರು…
ನಂತರ ಅಶಕ್ತರು, ರೋಗಪೀಡಿತರನ್ನು ಹಿಟ್ಲರ್ ಸೆರೆಗೆ ಅಥವಾ ಕೊಲೆಗೆ ಗುರಿಮಾಡುತ್ತಿದ್ದಾಗಲೂ ಇದರಿಂದ ಒಟ್ಟಾರೆಯಾಗಿ ಜರ್ಮನಿಗೆ ಒಳ್ಳೆಯದೇ ಆಗುತ್ತದೆಂದು ಈ ಪಾದ್ರಿ ಭಾವಿಸಿದ್ದರು.
1938 ರಲ್ಲಿ ನಿಧಾನಕ್ಕೆ ಜರ್ಮನಿ ಯ ಹಲವು ನಗರಗಳ ಹೊರವಲಯಗಳಲ್ಲಿ ಪ್ರಾರಂಭಗೊಂಡ ಹಿಟ್ಲರನ Concentration Camp ಗಳನ್ನು Workers Camp ಗಳೆಂದೇ ತಮ್ಮನ್ನು ನಂಬಿಸಿಕೊಂಡಿದ್ದರು.
ಆದರೆ ಜರ್ಮನಿಯ ಜನಯಂಗೀಯ ಶುದ್ಧತೆಯನ್ನು ಕಾಪಾಡಿಕೊಳ್ಳಲು ಜರ್ಮನಾರ ರಕ್ತ ಮತ್ತು ಚಿಂತನೆಗಳಿಂದ ಅನಾರ್ಯತೆಯನ್ನು ಶುದ್ಧಗೊಳಿಸಲು ಹಿಟ್ಲರ್, ಯೆಹೂದಿಗಳನ್ನು, ಕಮ್ಯುನಿಸ್ಟರನ್ನು, ಭಿನ್ನಮತೀಯ ಕೆಥೊಲಿಕ-ಪ್ರೊಟೆಶ್ಟೆಂಟುಗಳನ್ನೂ , ಜಿಪ್ಸಿ ಇನ್ನಿತರ ಅಲೆಮಾರಿಗಳನ್ನು ಸಾರಾಸಗಟು ಕೊಂದುಹಾಕುವುದೊಂದೇ FINAL SOLUTION ಎಂದು ತೀರ್ಮಾನಿಸಿದ ಮೇಲೆ ತಾವು ಮಾತ್ರ ಹಿಟ್ಲರನ ಆಳ್ವಿಕೆಯಲ್ಲಿ ಸುರಕ್ಷಿತರು ಎಂದು ಭಾವಿಸಿಕೊಂಡಿದ್ದ ಪಾಸ್ಟರ್ ನೆಮ್ಯೂಲಾರ್ ಒಳಗೊಂಡಂತೆ ಸಾವಿರಾರು ಪಾದ್ರಿಗಳು ಬಂಧನಕ್ಕೊಳಗಾದರು. ಕೊಲ್ಲಲ್ಪಟ್ಟರು. ಅದೃಷ್ಟವಶಾತ್ ಈ ಪಾದ್ರಿ ಬದುಕುಳಿದರು.
ಹಿಂತಿರುಗಿ ನೋಡುವುದಾದರೆ, ಹಿಟ್ಲರ್ ನೇತೃತ್ವದ ನಾಜಿಗಳು ಅಧಿಕಾರಕ್ಕೆ ಬಂದ ಕೊಡಲೇ ಮೊದಲು ಕಗ್ಗೊಲೆ ಗಳನ್ನು ನಡೆಸುವ ಮೂಲಕ ಪ್ರಬಲವಾಗಿದ್ದ ಕಮ್ಯುನಿಸ್ಟ್ ವಿರೋಧವನ್ನು ನಿವಾರಿಸಿಕೊಂಡರು… ನಂತರ ಎಲ್ಲ ವಿರೋಧ ಪಕ್ಷ ಗಳನ್ನು ನಿಷೇಧಿಸಿ ವಿರೋಧ ಮುಕ್ತ ಜರ್ಮನಿ ಯನ್ನು ನಿವಾರಿಸಿಕೊಂಡರು..

1934-38 ರ ನಡುವೆ ಯೆಹೂದಿಗಳಿಗೆ ನಾಗರಿಕ ಸ್ವಾತಂತ್ರ್ಯವನ್ನು, ಉದ್ಯೋಗ ಮತ್ತು ಆಸ್ತಿ ಮಾಡುವ ಹಕ್ಕನ್ನು, ನಂತರ ಮತದಾನದ ಹಕ್ಕನ್ನು ಕಿತ್ತುಕೊಂಡರು… 1940ರಲ್ಲಿ ಅಷ್ಟೂ ಯೆಹೂದಿಗಳನ್ನು ಮಡಗಾಸ್ಕರ್ ದ್ವೀಪಕ್ಕೆ ಓಡಿಸುವ ಯೋಜನೆಯನ್ನು ಮಾಡಿದ್ದರು…
ಅಂತಿಮವಾಗಿ ಜಗತ್ತಿನಲ್ಲಿ ಜರ್ಮನ್ ಜನಾಂಗೀಯ ಶ್ರೇಷ್ಠತೆಗೆ ಮತ್ತು ನಾಜಿ ಚಿಂತನೆಗೆ ಅಡ್ಡಿಯಿದ್ದ ಎಲ್ಲ ಯೆಹೂದಿಗಳನ್ನು, ಜಿಪ್ಸಿಯಂತ ಅಲೆಮಾರಿಗಳನ್ನೂ, ಕಮ್ಯುನಿಷ್ಟರನ್ನೂ, ಭಿನ್ನಮತೀಯ ಕೆಥೊಲಿಕ, ಪ್ರೊಟೆಸ್ಟೆಂಟುಗಳನ್ನೂ…. ಸಾರಾ ಸಗಟು ಕೊಂದುಹಾಕುವ Final Solution ಜಾರಿ ಮಾಡಿದರು…
1942-45ರ ಮೂರು ವರ್ಷಗಳ ಅವಧಿಯಲ್ಲಿ ನಾಜಿಗಳು 60 ಲಕ್ಷ ಜನರನ್ನು, ಪ್ರಧಾನವಾಗಿ ಯೆಹೂದಿಗಳನ್ನು ಕೊಂದುಹಾಕಿದರು…
ನಾಜಿಗಳ ಈ ಜನಾಂಗೀಯ ಶ್ರೇಷ್ಠತೆಯ ಫ್ಯಾಸಿಶಂನಿಂದಾಗಿ 43 ಲಕ್ಷ ಜರ್ಮನರೂ ಪ್ರಾಣತೆತ್ತರು…
ಆದರೆ, ಎಲ್ಲರನ್ನೂ ಎಲ್ಲವನ್ನೂ ಬಲಿತೆಗೆದುಕೊಳ್ಳುವ ಈ ನಾಜಿ-ಫ್ಯಾಸಿಸ್ಟರ ರಾಜಕಾರಣವನ್ನು ಅರ್ಥಮಾಡಿಕೊಳ್ಳದೇ ಪಾಸ್ಟರ್ ನೆಮ್ಯೂಲರ್ ಅಂತವರೂ, ಉದಾರವಾದಿ ನಿಲುವಿನವರೂ, ಪಶ್ಚಿಮದ ಪ್ರಜಾತಂತ್ರ ಜಗತ್ತು ಪ್ರಾರಂಭದಲ್ಲಿ ಬೆಂಬಲಿಸುವ ಪ್ರಮಾದ ಮಾಡಿದ್ದರು…
ಅಂಥ ಪ್ರಮಾದವನ್ನು ಪ್ರಾರಂಭದಲ್ಲಿ ಗಾಂಧಿ ಕೂಡ ಮಾಡಿದ್ದರು..
ಆದರೆ, ನಂತರ 1945ರಲ್ಲಿ ಬದುಕುಳಿದ ಹೂರಬಂದ ಮಾರ್ಟಿನ್ ನೆಮ್ಯೂಲರ್.. ತಮ್ಮ ತಪ್ಪೊಪ್ಪಿಗೆ ಭಾಷಣದಲ್ಲಿ…
“ಹಿಟ್ಲರ್ ಪ್ರಾರಂಭದ ದಿನಗಳಲ್ಲಿ ಕಮ್ಯುನಿಸ್ಟರನ್ನು ಕೊಲ್ಲತ್ತಿದ್ದ ಕಾಲದಲ್ಲೇ ಇಡೀ ಜರ್ಮನ್ ಸಮಾಜ ತಿರುಗಿಬಿದ್ದಿದ್ದರೆ, ಜರ್ಮನಿ ಇಂಥಾ ದಾರುಣ ಕ್ರೌರ್ಯಗಳನ್ನು ಕಾಣುತ್ತಿರಲಿಲ್ಲವೆಂದು ಮನದಾಳದಿಂದ ಭಾವಿಸಿ ಮೇಲೆ ಹೇಳಿದ ಭಾಷಣ ಮಾಡಿದರು.

ಈಗ ಭಾರತದಲ್ಲೂ ಮೋದಿ ಸರ್ಕಾರ FINAL SOLUTION ಹುಡುಕುತ್ತಿದೆ, ಹರಿದ್ವಾರದ ಭಾಷಣ, ಸಂಸದ ತೇಜಸ್ವಿ ಸೂರ್ಯನ ಭಾಷಣ ಎಲ್ಲವೂ ಅದರ ಭಾಗಗಳೇ..
ಪಾಸ್ಟರ್ ಮಾರ್ಟಿನ್ ನೆಮ್ಯೂಲರ್ ನಿಂದ ಭಾರತೀಯರೇನಾದರೂ ಕಲಿಯಬಹುದೇ?

Join Whatsapp
Exit mobile version