Home ರಾಜ್ಯ ಕೋಮುವಾದಿಗಳ ಪ್ರೇರಣೆಯಿಂದ ಮಹಿಳೆ ಹಣ ಎಸೆದಿದ್ದಾರೆ ಎಂದ ಯು.ಟಿ. ಖಾದರ್

ಕೋಮುವಾದಿಗಳ ಪ್ರೇರಣೆಯಿಂದ ಮಹಿಳೆ ಹಣ ಎಸೆದಿದ್ದಾರೆ ಎಂದ ಯು.ಟಿ. ಖಾದರ್

ಬಾಗಲಕೋಟೆ: ಕೋಮುವಾದಿಗಳ ಪ್ರೇರಣೆಯಿಂದ ಮಹಿಳೆ ಹಣ ಎಸೆದಿದ್ದಾರೆ ಎಂದು‌ ಮಾಜಿ ಸಚಿವ ಯು.ಟಿ. ಖಾದರ್​​ ಆರೋಪಿಸಿದ್ದಾರೆ.

  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯ ಕೊಡಿಸಿ ಅಂತ ಕೇಳಿದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯೂ ಅಲ್ಲ. ನಮ್ಮಿಂದ ಹೋರಾಟ ಮಾತ್ರ ಸಾಧ್ಯ. ಸಿದ್ದರಾಮಯ್ಯನವರು ನೊಂದವರ ಬಗ್ಗೆ ಅನುಕಂಪ ತೋರಿಸಿ ವೈಯಕ್ತಿಕ ಸಹಾಯ ಮಾಡಲು ಮುಂದಾಗಿದ್ದರು. ಆ ಮಹಿಳೆ ಮೊದಲು ಬೇಡ ಎಂದು ನಿರಾಕರಿಸಿ ನಂತರ ಮನಬದಲಿಸಿ ಹಣ ಸ್ವೀಕರಿಸಿದ್ದಾರೆ. ಆ ಮಹಿಳೆ ಕೋಮುವಾದಿಗಳ ಪ್ರೇರಣೆಯಿಂದಾಗಿ ಮತ್ತು ಬೇರೆಯವರ ಕುಮ್ಮಕ್ಕಿನಿಂದ ಈ ರೀತಿ ಮಾಡಿದ್ದಾರೆ. ಹೀಗೆ ಮಾಡುವುದರಿಂದ ಕೋಮುವಾದಿಗಳಿಗೆ ಮತ್ತಷ್ಟು ಪ್ರೇರಣೆ ನೀಡಿದಂತಾಗುತ್ತದೆ ಎಂದು ಹೇಳಿದರು.

Join Whatsapp
Exit mobile version