ಪಣಜಿ: ಗೋವಾದಲ್ಲಿ 2022ರಲ್ಲಿ ನಡೆಯಲಿರುವ ಚುನಾವಣೆ ನಿಮಿತ್ತ ಮತ ಸೆಳೆಯಲು ಅರವಿಂದ್ ಕೇಜ್ರಿವಾಲ್ ಏಳು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಮೊದಲನೇದಾಗಿ ಯುವಕರಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ.
ಗೋವಾದ ಪ್ರತಿ ಮನೆಯಲ್ಲಿರುವ ಒಬ್ಬ ನಿರುದ್ಯೋಗಿಗೆ ತಿಂಗಳಿಗೆ 3000 ರೂ.ಭತ್ಯೆ ನೀಡಲಾಗುತ್ತದೆ. ಅವರಿಗೆ ಉದ್ಯೋಗ ಸಿಗುವವರೆಗೂ ಈ ಹಣ ನೀಡಲಾಗುತ್ತದೆ. ಕೆಲಸ ಸಿಕ್ಕ ಬಳಿಕ ಅದನ್ನು ನಿಲ್ಲಿಸಲಾಗುತ್ತದೆ. ಅಲ್ಲದೆ ಶೇ.80ರಷ್ಟು ಉದ್ಯೋಗವನ್ನು ಗೋವಾದ ಜನರಿಗಾಗಿಯೇ ಅಂದರೆ ಸ್ಥಳೀಯರಿಗಾಗಿಯೇ ಮೀಸಲಿಡಲಾಗುತ್ತದೆ ಎಂದೂ ಭರವಸೆ ನೀಡಿದ್ದಾರೆ.
ಲಂಚವಿಲ್ಲದೆ ಸರ್ಕಾರಿ ಕೆಲಸ ಪಡೆಯಲು ಸಾಧ್ಯವಿಲ್ಲ ಎಂಬ ನಂಬಿಕೆ ಬಲವಾಗಿ ಇದೆ. ಆ ಸಂಪ್ರದಾಯವನ್ನು ನಾವು ಸಂಪೂರ್ಣವಾಗಿ ಹೋಗಲಾಡಿಸುತ್ತೇವೆ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.