Home ಟಾಪ್ ಸುದ್ದಿಗಳು ನನ್ನ ವಿರುದ್ಧ ಪೊಲೀಸ್ ಠಾಣೆಗೆ ಹೋದ ತಕ್ಷಣ ಸತ್ಯ ಸುಳ್ಳಾಗಲ್ಲ: ನಟ ಚೇತನ್ ಪ್ರತಿಕ್ರಿಯೆ

ನನ್ನ ವಿರುದ್ಧ ಪೊಲೀಸ್ ಠಾಣೆಗೆ ಹೋದ ತಕ್ಷಣ ಸತ್ಯ ಸುಳ್ಳಾಗಲ್ಲ: ನಟ ಚೇತನ್ ಪ್ರತಿಕ್ರಿಯೆ

ಬೆಂಗಳೂರು: ನನ್ನ ವಿರುದ್ಧ ನೀವು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ ತಕ್ಷಣ ಸತ್ಯ ಎಂದೂ ಸುಳ್ಳು ಅಗುವುದಿಲ್ಲ ಎಂದು ನಟ ಚೇತನ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತ ವೀಡಿಯೋವೊಂದನ್ನು ಟ್ವಿಟ್ಟರ್’ನಲ್ಲಿ ಪೋಸ್ಟ್ ಮಾಡಿರುವ ಅವರು, ನಾನು ನಾಸ್ತಿಕನೂ ಅಲ್ಲ, ಕಮ್ಯೂನಿಸ್ಟ್ ಅಲ್ಲ. ನಾವು ಅಧ್ವೈತವಾದಿ. ಬುದ್ಧ, ಬಾಬಾಸಾಹೇಬ್ ಅಂಬೇಡ್ಕರ್, ಅಲ್ಲಮಪ್ರಭು ಎಂಬವರು ಯಾರೂ ದೇವರ ಬಗ್ಗೆ ಮಾತಾಡಿಲ್ಲ. ದೇವರು ಇದ್ದಾನೆ/ಇದ್ದಾಳೆ/ಇದ್ದಾವೆ ಎಂದು ಹೇಳಿಲ್ಲ. ಇಲ್ಲಾ ಎಂದೂ ಹೇಳಿಲ್ಲ. ನಾವು ಸಮಾನತೆಯನ್ನು ಸಾರುತ್ತೇವೆ. ನಾನು ಬಲಪಂಥೀಯನೂ ಅಲ್ಲ, ಎಡಪಂಥೀಯನೂ ಅಲ್ಲ, ಮಧ್ಯಪಂಥೀಯನೂ ಅಲ್ಲ. ನಾನು ಸತ್ಯಪಂಥೀಯನು ಎಂದು ಹೇಳಲು ಇಚ್ಛೇಪಡುತ್ತೇನೆ ಎಂದು ತಿಳಿಸಿದರು.

ನೀವು ಪೊಲೀಸ್ ಠಾಣೆಗೆ ಹೋದ ತಕ್ಷಣ ಸತ್ಯ ಎಂದೂ ಸುಳ್ಳಾಗಲ್ಲ. ನೀವು ಪೊಲೀಸ್ ಠಾಣೆಗೆ ಯಾಕೆ ಹೋಗುತ್ತೀರಾ? ನಿಮ್ಮಲ್ಲಿ ತಾಕತ್ತೂ ಇಲ್ಲ ಮತ್ತು ನಿಮ್ಮಲ್ಲಿ ವಿಚಾರದ ಕೊರತೆಯೂ ಇದೆ. ನೀವು ಮಾಡುವುದನ್ನು ಮಾಡಿ. ನಾವು ಎಲ್ಲವನ್ನೂ ಎದುರುಸುತ್ತೇವೆ ಎಂದು ತಿಳಿಸಿದರು.
ನಟ ಚೇತನ್ ಅವರು ಇತ್ತೀಚೆಗೆ ವಿವಾದಾತ್ಮಕ ಹೇಳಿಕೆವೊಂದನ್ನು ನೀಡಿದ್ದು, ಭೂತ, ಕೋಲ ಹಿಂದೂ ಧರ್ಮದ ಆಚರಣೆಯಲ್ಲ. ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು ವೈದಿಕ – ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನದ್ದು. ಮೂಲ ನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಮನವಿ ಮಾಡುತ್ತೇವೆ ಎಂದು ಹೇಳಿದ್ದರು.

ಚೇತನ್ ಹೇಳಿಕೆಯನ್ನು ವಿರೋಧಿಸಿ ಹಲವು ಕಡೆಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಪ್ರಕರಣ ಕೂಡ ದಾಖಲಾಗಿದೆ. ಅಲ್ಲದೆ ದೈವದ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಲಾಗಿದೆ.

Join Whatsapp
Exit mobile version