Home ಟಾಪ್ ಸುದ್ದಿಗಳು ಪಾಕಿಸ್ತಾನದ ಪತ್ರಕರ್ತ ಅರ್ಷದ್ ಶರೀಫ್ ರನ್ನು ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು

ಪಾಕಿಸ್ತಾನದ ಪತ್ರಕರ್ತ ಅರ್ಷದ್ ಶರೀಫ್ ರನ್ನು ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು

ಇಸ್ಲಾಮಾಬಾದ್ : ಪಾಕಿಸ್ತಾನದ ಹಿರಿಯ ಪತ್ರಕರ್ತ ಅರ್ಷದ್ ಶರೀಫ್ ಅವರನ್ನು ಕೀನ್ಯಾದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಅವರ ಪತ್ನಿ ಜವೇರಿಯಾ ಸಿದ್ದಿಕಿ ಸೋಮವಾರ ಮಾಹಿತಿ ನೀಡಿದ್ದಾರೆ.

ಶರೀಫ್ ಅವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.

ಈ ಕುರಿತು ಟ್ವೀಟ್ ಮಾಡಿರುವ ಜವೇರಿಯಾ ಸಿದ್ದಿಕಿ, ನಾನು ಇಂದು ನನ್ನ ಸ್ನೇಹಿತ, ಪತಿ ಮತ್ತು ನನ್ನ ನೆಚ್ಚಿನ ಪತ್ರಕರ್ತನನ್ನು ಕಳೆದುಕೊಂಡಿದ್ದೇನೆ ಎಂದು ಪೊಲೀಸರು ತಿಳಿಸಿದ್ದಾರೆ. ನಮ್ಮ ಗೌಪ್ಯತೆಯನ್ನು ಗೌರವಿಸಿ.  ದಯವಿಟ್ಟು ನಮ್ಮ ಕುಟುಂಬದ ಚಿತ್ರಗಳು, ವೈಯಕ್ತಿಕ ವಿವರಗಳು ಮತ್ತು ಆಸ್ಪತ್ರೆಯಲ್ಲಿದ್ದಂತಹ  ಅವರ ಕೊನೆಯ ಚಿತ್ರಗಳನ್ನು ಹಂಚಿಕೊಳ್ಳಬೇಡಿ. ನಿಮ್ಮ ಪ್ರಾರ್ಥನೆಯಲ್ಲಿ ನಮ್ಮನ್ನು ನೆನಪಿಸಿಕೊಳ್ಳಿ ಎಂದ ಕೋರಿದ್ದಾರೆ.

 ಅರ್ಷದ್ ಅವರು ಈ ವರ್ಷದ ಆರಂಭದಲ್ಲಿ ತಮ್ಮ ವಿರುದ್ಧ ಹಲವಾರು ದೇಶದ್ರೋಹ ಪ್ರಕರಣಗಳು ದಾಖಲಾದ ಬೆನ್ನಲ್ಲೇ  ಪಾಕಿಸ್ತಾನವನ್ನು ತೊರೆದಿದ್ದರು ಎಂದು ತಿಳಿದು ಬಂದಿದೆ.

ಕೀನ್ಯಾದಲ್ಲಿರುವ ತಮ್ಮ ಹೈಕಮಿಷನ್ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸುತ್ತಿದೆ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ಹೇಳಿದೆ.

ಅರ್ಷದ್ ಶರೀಫ್ ಅವರ ಸಾವಿನ ಸುದ್ದಿ ಹರಡಿದ ನಂತರ ಅನೇಕ ಪ್ರಮುಖ ಪಾಕಿಸ್ತಾನಿಗಳು ಮತ್ತು ಮಾಧ್ಯಮ ಸಮುದಾಯದ ಸದಸ್ಯರು ಸಂತಾಪ ಸೂಚಿಸಿದ್ದಾರೆ.

Join Whatsapp
Exit mobile version