Home ಟಾಪ್ ಸುದ್ದಿಗಳು ಶಿಕ್ಷಕನಿಗೆ ತನ್ನ ವಿದ್ಯಾರ್ಥಿನಿಯೊಂದಿಗೇ ಅಕ್ರಮ ಸಂಬಂಧ; ಬಯಲಾದಾಗ ಇಬ್ಬರೂ ಆತ್ಮಹತ್ಯೆ

ಶಿಕ್ಷಕನಿಗೆ ತನ್ನ ವಿದ್ಯಾರ್ಥಿನಿಯೊಂದಿಗೇ ಅಕ್ರಮ ಸಂಬಂಧ; ಬಯಲಾದಾಗ ಇಬ್ಬರೂ ಆತ್ಮಹತ್ಯೆ

ಸಹರಾನ್ಪುರ: ತಮ್ಮ‌ ಅಕ್ರಮ ಸಂಬಂಧ ವಿವಾದವಾದಾಗ ಶಿಕ್ಷಕ ಮತ್ತು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮಂಗಳವಾರ ಕಾಡಿನಲ್ಲಿ 40 ವರ್ಷದ ಶಿಕ್ಷಕ ಹಾಗೂ 17 ವರ್ಷದ ಬಾಲಕಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇವರಿಬ್ಬರು ಅಕ್ರಮ ಸಂಬಂಧ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


ಶಿಕ್ಷಕನು ತಾನು ಕೆಲಸ ಮಾಡುತ್ತಿದ್ದ ಶಾಲೆಯಲ್ಲಿಯೇ ಓದುತ್ತಿದ್ದ ಹುಡುಗಿಯೊಂದಿಗೆ ಸಂಬಂಧ ಹೊಂದಿದ್ದನು. ಈ ವಿಚಾರ ಬಹಿರಂಗಗೊಂಡ ಬಳಿಕ ಬಾಲಕಿಯ ಸಂಬಂಧಿಕರು ಶಿಕ್ಷಕನ ವಿರುದ್ಧ ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದರು.

ಸೆ.3ರಂದು ಶಿಕ್ಷಕ ಹಾಗೂ ಬಾಲಕಿ ನಾಪತ್ತೆಯಾಗಿದ್ದರು. ನಂತರ ಬಾಲಕಿಯ ಮನೆಯವರು ಮಗಳು ನಾಪತ್ತೆಯಾಗಿದ್ದು, ಶಿಕ್ಷಕ ಆಕೆಯನ್ನು ಅಪಹರಿಸಿದ್ದಾನೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು.


ದೂರಿನ ಆಧಾರದಲ್ಲಿ ತನಿಖೆ ನಡೆಸಿದಾಗ ಕಾಡೊಂದರಲ್ಲಿ ಇವರಿಬ್ಬರ ಕೊಳೆತ ಮೃತದೇಹ ಪತ್ತೆಯಾಗಿದೆ ಎಂದು ಸಹರಾನ್‌ಪುರ ಪೊಲೀಸ್ ಇನ್ಸ್‌ಪೆಕ್ಟರ್ ವಿಪಿನ್ ತಾಡಾ ತಿಳಿಸಿದ್ದಾರೆ.

Join Whatsapp
Exit mobile version