Home ಟಾಪ್ ಸುದ್ದಿಗಳು ಸೆರೆವಾಸ ಮುಗಿಸಿ ಹೊರ ಬಂದ ಕೈದಿಗಳಿಗೆ ನೌಕರಿ ಕೂಡಿಸಲು ವೇದಿಕೆ ಸಿದ್ಧ

ಸೆರೆವಾಸ ಮುಗಿಸಿ ಹೊರ ಬಂದ ಕೈದಿಗಳಿಗೆ ನೌಕರಿ ಕೂಡಿಸಲು ವೇದಿಕೆ ಸಿದ್ಧ

ಬೆಂಗಳೂರು: ಸೆರೆವಾಸ ಮುಗಿಸಿ ಹೊರ ಬಂದ ಕೈದಿಗಳ ಜೀವನ ನಿರ್ವಹಣೆಗಾಗಿ ನೌಕರಿ ಕೂಡಿಸಲು ವೇದಿಕೆ ಸಿದ್ಧವಾಗಿದೆ.

ಅಪರಾಧ ಕೃತ್ಯಗಳಲ್ಲಿ ಜೈಲು ಸೇರಿ ಸಜೆ ಸಮಯದಲ್ಲಿರುವಾಗ ಸೌಜನ್ಯದಿಂದ ವರ್ತಿಸಿ ಹಾಗೂ ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾಗಿ ಹೊರ ಬರುವ ಕೈದಿಗಳಿಗೆ ಉದ್ಯೋಗಾವಶವನ್ನು ಕಲ್ಪಿಸಿಕೊಡಲು ತಯಾರಿ ಮಾಡಲಾಗುತ್ತಿದೆ.

ಅದಕ್ಕೆ ಪೂರಕ ಎಂಬಂತೆ ಜೈಲು ಹಿರಿಯ ಅಧಿಕಾರಿಗಳು ಪೆಟ್ರೋಲಿಯಂ ಸಂಸ್ಥೆಗಳಾದ ಭಾರತ್ ಪೆಟ್ರೋಲಿಯಂ ಸಂಸ್ಥೆ ಸೇರಿದಂತೆ ಎರಡು ಮೂರು ಸಂಸ್ಥೆಗಳ ಜೊತೆ ಮಾತುಕತೆ ನಡೆಸಿದ್ದಾರೆ.

ಪೆಟ್ರೋಲ್ ಬಂಕ್ ಗಳಲ್ಲಿ ಉದ್ಯೋಗಾವಕಾಶಗಳ ಕೊಡಿಸುವ ವ್ಯವಸ್ಥೆಗೆ ತಯಾರಿ ಮಾಡಲಾಗುತ್ತಿದೆ.

ಕೈದಿಗಳು ಎನ್ನುವ ಕಾರಣಕ್ಕೆ ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಹೊರ ಬಂದರೂ ಸಮಾಜದಲ್ಲಿ ಅವರಿಗೆ ಗುರುತಿಸಿ ಕೆಲಸ ಕೊಡುವುದಿಲ್ಲ.ಹಾಗಾಗಿ ಕೆಲವರು ಮತ್ತದೇ ದಾರಿಯನ್ನು ತುಳಿಯುವ ಕೆಲಸಗಳು ನಡೆಯುತ್ತಿದೆ.

ಆ ಒಂದು ಕಾರಣಕ್ಕೆ ಸನ್ನಡತೆ ಆಧಾರದ ಮೇಲೆ ಹೊರ ಬಂದವರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಕಾಯಕ್ಕೆ ಜೈಲು ಅಧಿಕಾರಿಗಳು ಮುಂದಾಗಿದ್ದಾರೆ.

Join Whatsapp
Exit mobile version