ಹೈದರಾಬಾದ್: ದನಗಳನ್ನು ಕಸಾಯಿಖಾನೆಗೆ ಮಾರಾಟ ಮಾಡಿದ ಆರೋಪದಲ್ಲಿ ಹೈದರಾಬಾದ್ ಸಮೀಪದ ದಬೀರಪುರ ಪ್ರದೇಶದ ಶ್ರೀ ಅಮ್ಮಾವರಿ ದೇವಾಲಯಂ ಇದರ ಇಬ್ಬರು ಅಧಿಕಾರಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ದೇವಾಲಯ ಸಮಿತಿ ಅಧ್ಯಕ್ಷ ಡಿ ಪ್ರೇಮ್ ಕುಮಾರ್ ಮತ್ತು ಸದಸ್ಯ ಮಹೇಂದರ್ ಎಂಬವರು ಪ್ರಕರಣದ ಆರೋಪಿಗಳಾಗಿದ್ದಾರೆ. ಇಬ್ಬರೂ ಸ್ಥಳೀಯ ಕಸಾಯಿಖಾನೆಗೆ ದನಗಳನ್ನು ಮಾರಾಟ ಮಾಡಿದ್ದಾರೆಂದು ಆರೋಪಿಸಿ ಅಖಿಲ ಭಾರತ ಗೋ ಸೇವಾ ಫೌಂಡೇಶನ್ ಪ್ರಕರಣ ದಾಖಲಿಸಿದೆ.
ತೆಲಂಗಾಣ ಗೋ ಹತ್ಯೆ ತಡೆ ಮತ್ತು ಪ್ರಾಣಿ ಸಂರಕ್ಷಣಾ ಕಾಯಿದೆ 1977 ಇದರನ್ವಯ ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.