ಸನ್ಮಾರ್ಗ ಪತ್ರಿಕೆಯ ಪ್ರಕಾಶಕ, ಜಮಾಅತೆ ಇಸ್ಲಾಮೀ ಹಿಂದ್‌ನ ಹಿರಿಯ ಸದಸ್ಯ ಎಂ. ಸಾದುಲ್ಲ ನಿಧನ

Prasthutha|

ಮಂಗಳೂರು: ಜಮಾಅತೆ ಇಸ್ಲಾಮೀ ಹಿಂದ್‌ ಮಂಗಳೂರು ಶಾಖೆಯ ಹಿರಿಯ ಸದಸ್ಯ, ಸನ್ಮಾರ್ಗ ವಾರಪತ್ರಿಕೆಯ ಪ್ರಕಾಶಕ ಹಾಗೂ ಸಂಸ್ಥಾಪಕ ಸದಸ್ಯ, ಅನುವಾದಕರೂ ಆದ ಎಂ. ಸಾದುಲ್ಲ ನಿಧನ ಹೊಂದಿದರು.

- Advertisement -

ಅವರಿಗೆ 76 ವರ್ಷ ವಯಸ್ಸಾಗಿತ್ತು. ವಯೋ ಸಹಜ ಅನಾರೋಗ್ಯದಿಂದಿದ್ದ ಅವರು ಸೋಮವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಕುರ್‌ಆನಿನ ಬಹಳ ಆಳ ಜ್ಞಾನ ಹೊಂದಿದ್ದ ಸಾದುಲ್ಲ, ಅನುವಾದದಲ್ಲಿ ಬಹಳ ನೈಪುಣ್ಯತೆ ಹೊಂದಿದ್ದರು. ತಫ್ಹೀಮುಲ್ ಕುರ್‌ಆನ್, ಸಹೀಹ್ ಬುಖಾರಿ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ಶಾಂತಿ ಪ್ರಕಾಶನದ ಟ್ರಸ್ಟಿಯಾಗಿದ್ದ ಅವರು, ದಾರಿದೀಪ, ಹದೀಸ್ ಗ್ರಂಥ ಅನುವಾದ ಹಲವು ಕೃತಿಗಳನ್ನು ಬರೆದಿದ್ದಾರೆ.

- Advertisement -

ಸನ್ಮಾರ್ಗ ವಾರಪತ್ರಿಕೆಯ ಆರಂಭ ಕಾಲದಿಂದಲೂ ಸದಸ್ಯರಾಗಿದ್ದ ಇವರು, ಪತ್ನಿ, ನಾಲ್ಕು ಗಂಡು ಹಾಗೂ ಎರಡು ಹೆಣ್ಣು ಮಕ್ಕಳ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಬಂದರ್‌ನ ಕಂದಕ್‌ನಲ್ಲಿರುವ ಮನೆಯಲ್ಲಿ ಅವರ ಜನಾಝ ಇದ್ದು, ಮೃತರ ಅಂತ್ಯಕ್ರಿಯೆಯು ಮಂಗಳವಾರ ಝಹರ್ ನಮಾಝಿಗೆ ಮಂಗಳೂರಿನ ಕೇಂದ್ರ ಜುಮಾ ಮಸೀದಿ ಝೀನತ್ ಭಕ್ಷ್‌ನಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Join Whatsapp
Exit mobile version