ಲೀಗ್-1 ಫುಟ್ಬಾಲ್ ಟೂರ್ನಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬಲಿಷ್ಠ ಪ್ಯಾರಿಸ್ ಸೈಂಟ್ ಜರ್ಮನ್ ತಂಡ, ಎಲ್‌ಒಎಸ್‌ಸಿ ಲಿಲ್ಲೆ ತಂಡವನ್ನು 7-1 ಗೋಲುಗಳ ಅಂತರದಲ್ಲಿ ಭರ್ಜರಿಯಾಗಿಯೇ ಮಣಿಸಿದೆ.
ಪಂದ್ಯ ಪ್ರಾರಂಭವಾಗಿ 8 ಸೆಕೆಂಡ್‌ಗಳಾಗುವಷ್ಟರಲ್ಲೇ ಪಿಎಸ್‌ಜಿ ಮೊದಲ ಗೋಲು ದಾಖಲಿಸಿತ್ತು. ಮೈದಾನದ ಮಧ್ಯ ಬಾಗದಿಂದ ಮೆಸ್ಸಿ ನೀಡಿದ ಪಾಸ್‌ಅನ್ನು ಕಿಲಿಯನ್ ಎಂಬಾಪೆ ಸುಲಭ ಗೋಲಾಗಿ ಪರಿವರ್ತಿಸಿದ್ದರು. ಇದು ಲೀಗ್-1 ಫುಟ್ಬಾಲ್ ಟೂರ್ನಿಯ ಇತಿಹಾದಲ್ಲೇ ಅತಿವೇಗದ ಗೋಲು ಎಂಬ ದಾಖಲೆಯನ್ನು ಬರೆಯಿತು.
ಪಂದ್ಯದಲ್ಲಿ ಎಂಬಾಪೆ ಮೂರು ಗೋಲು ಗಳಿಸಿದರೆ, ನೇಮರ್ 2, ಹಕಿಮಿ ಮತ್ತು ಮೆಸ್ಸಿ ತಲಾ ಒಂದು ಗೋಲುಗಳಿಸಿದರು. ಟೂರ್ನಿಯಲ್ಲಿ ಇದುವರೆಗೂ ಮೂರು ಪಂದ್ಯಗಳನ್ನಾಡಿರುವ ಹಾಲಿ ಚಾಂಪಿಯನ್ ಪಿಎಸ್‌ಜಿ, ಮೂರುರಲ್ಲಿಯೂ ಗೆಲುವು ದಾಖಲಿಸಿದ್ದು, 9 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.