Home ಕರಾವಳಿ ಸಾಂವಿಧಾನಿಕ ಹಕ್ಕು ಕಸಿಯಲು ಮುಂದಾದ ಪೊಲೀಸ್ ಇಲಾಖೆ; ಕಾನೂನಾತ್ಮಕ ಹೋರಾಟ ನಡೆಸುವುದಾಗಿ SDPI ಎಚ್ಚರಿಕೆ

ಸಾಂವಿಧಾನಿಕ ಹಕ್ಕು ಕಸಿಯಲು ಮುಂದಾದ ಪೊಲೀಸ್ ಇಲಾಖೆ; ಕಾನೂನಾತ್ಮಕ ಹೋರಾಟ ನಡೆಸುವುದಾಗಿ SDPI ಎಚ್ಚರಿಕೆ

ಮಂಗಳೂರು: ಎಸ್‌ಡಿಪಿಐಯ ಜಿಲ್ಲಾ ನಾಯಕರನ್ನು ಬಂಧಿಸಿರುವುದನ್ನು ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸುತ್ತಿರುವುದು ಸಂವಿಧಾನಕ್ಕೆ ಮಾಡುವ ಅಪಚಾರವಾಗಿದೆ ಎಂದು SDPI ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, SDPI ಮುಖಂಡರನ್ನು ವಿಚಾರಣೆಗೆ ಕರೆದರೆ ಅವರೇ ಬರುತ್ತಿದ್ದರು. ಅದು ಬಿಟ್ಟು ಸಾರ್ವಜನಿಕ ವಾಹನದಲ್ಲಿ ಬರುವ ವೇಳೆ ಯಾಕೆ ಬಂಧಿಸಬೇಕಿತ್ತು. NIA ತನಿಖಾ ಸಂಸ್ಥೆಯು SDPI ನಾಯಕರನ್ನು ಟಾರ್ಗೆಟ್ ಮಾಡಿ ಬಂಧಿಸುತ್ತಿರುವುದು ಖಂಡನೀಯ. ರಾಜಕೀಯ ಲಾಭಕ್ಕಾಗಿ ಬಿಜೆಪಿ ಸರ್ಕಾರ ಇದನ್ನು ಮಾಡುತ್ತಿದೆ ಎಂದು ಹೇಳಿದರು.


ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ಸುಳ್ಯ ವಿಧಾನಸಭಾ ಕ್ಷೇತ್ರಾಧ್ಯಕ್ಷ ಇಕ್ಬಾಲ್ ಬೆಳ್ಳಾರೆ ಅವರನ್ನು ಯಾವುದೇ ನೋಟಿಸ್ ನೀಡದೇ ಪೊಲೀಸರು ಬಂಧಿಸಿದ್ದಾರೆ.ಇವರಿಬ್ಬರು ಎಲ್ಲೂ ತಲೆ ಮರೆಸಿಕೊಂಡಿರಲಿಲ್ಲ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ‌ಭಾಗವಹಿಸುತ್ತಿದ್ದರು.
ಯಾವುದೇ ಪ್ರಕರಣಕ್ಕೆ ಸಂಬಂಧವಿಲ್ಲದ ಇವರ ಬಂಧನವನ್ನು ಖಂಡಿಸಿ ರಾಜ್ಯಾದ್ಯಂತ SDPI ಪ್ರತಿಭಟನೆಗೆ ಅನುಮತಿ ಕೇಳಿತ್ತು. ಇಲಾಖೆ ಅನುಮತಿಯನ್ನೂ ನೀಡಿತ್ತು. ಆದರೆ ಮಂಗಳೂರು ಪೊಲೀಸರು ಮಾತ್ರ ಅನುಮತಿ ರದ್ದುಗೊಳಿಸಿದ್ದಾರೆ ಎಂದು ಹೇಳಿದರು.‌


ಪ್ರತಿಭಟನೆ ನಮ್ಮ ಹಕ್ಕು, ಅದನ್ನು ಪೊಲೀಸ್ ಇಲಾಖೆ ಹತ್ತಿಕ್ಕಿದೆ. ನಮ್ಮ ಸಾಂವಿಧಾನಿಕ ಹಕ್ಕು ಕಸಿಯಲು ಮುಂದಾದರೆ ಸುಮ್ಮನಿರಲ್ಲ. ಕಾನೂನು ಮೂಲಕ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಎಲ್ಲ ನಗರ, ಪಟ್ಟಣಗಳಲ್ಲಿ ನಾವು ಪ್ರತಿಭಟನೆ ನಡೆಸಲಿದ್ದೇವೆ. ಪೋಲಿಸ್ ಇಲಾಖೆ ಸಂವಿಧಾನವನ್ನು ಮರೆತಿದೆಯೇ? ಇವರು ಯಾರನ್ನು ಮೆಚ್ವಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.


ಪೊಲೀಸ್ ಇಲಾಖೆ ರಾತ್ರಿ ವೇಳೆ ಮುಖಂಡರ ಮನೆಗೆ ದಾಳಿ ಮಾಡುವುದು ನಿಲ್ಲಿಸಬೇಕು. ಎಸ್‌ಡಿಪಿಐ ಚುನಾವಣಾ ಆಯೋಗದಲ್ಲಿ ನೋಂದಣಿಯಾದ ರಾಜಕೀಯ ಪಕ್ಷ. ಇದೇ ರೀತಿ ಪಕ್ಷದ ನಾಯಕರನ್ನು ಟಾರ್ಗೆಟ್ ಮಾಡಲು ಮುಂದಾದರೆ, ಪ್ರತಿಭಟನೆ ತಡೆಯಲು ಮುಂದಾದರೆ ಕಾನೂನಾತ್ಮಕವಾಗಿ ಎದುರಿಸುವುದು ಮಾತ್ರವಲ್ಲದೆ, ಚುನಾವಣಾ ಆಯೋಗಕ್ಕೂ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಂಗಳೂರು ಪೊಲೀಸರು ಪ್ರಿವೆಂಟಿವ್ ಆಗಿ 15 ಮಂದಿಯ ಬಂಧನವಾಗಿದೆ.19 ಮಂದಿ‌ ಮೇಲೆ ಯುಎಪಿಎ ಪ್ರಕರಣ ದಾಖಲಿಸಲಾಗಿದೆ. ಅದರಲ್ಲಿ‌ ಜಿಲ್ಲಾಧ್ಯಕ್ಷರು, ರಾಜ್ಯ ಸಮಿತಿ ಸದಸ್ಯರು ಇದ್ದಾರೆ. ನಮ್ಮ 16 ಜನಸೇವಾ ಕೇಂದ್ರಗಳಿಗೆ ಬೀಗ ಹಾಕಿದ್ದಾರೆ. ಅಲ್ಲಿ ಸರ್ಕಾರಿ ಯೋಜನೆಗಳಿಗಾಗಿ ಸಾರ್ವಜನಿಕರು ಬರತ್ತಿದ್ದರು. ಈ ಸೇವಾ ಕಚೇರಿಗಳಿಗೆ ಬೀಗ ಹಾಕಿಸಿದ ಕಮಿಷನರ್ ಏನು ಸಾಧನೆ ಮಾಡಲು ಹೊರಟ್ಟಿದ್ದಾರೆ. ಹಾಗಾದರೆ ಎಲ್ಲಾ ರಕ್ತ ನಿಧಿಗಳಲ್ಲಿ SDPI ಕಾರ್ಯಕರ್ತರ ರಕ್ತ ಇದೆ. ಅದನ್ನು ಕೂಡ ವಶಕ್ಕೆ ಪಡೆದುಕೊಂಡು ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್, ಜಿಲ್ಲಾ ಕಾರ್ಯದರ್ಶಿ ಅಕ್ಬರ್, ಮೂಡಬಿದ್ರೆ ಕ್ಷೇತ್ರದ ಆಸಿಫ್ ಕೋಟೆಬಾಗಿಲು ಉಪಸ್ಥಿತರಿದ್ದರು.

Join Whatsapp
Exit mobile version