Home ಟಾಪ್ ಸುದ್ದಿಗಳು ವಿಧಾನಸಭೆ ಚುನಾವಣೆಗೆ 4 ದಿನ ಬಾಕಿ; ಕಾಂಗ್ರೆಸ್‌ ಗೆ ಕೈಕೊಟ್ಟ 26 ನಾಯಕರು

ವಿಧಾನಸಭೆ ಚುನಾವಣೆಗೆ 4 ದಿನ ಬಾಕಿ; ಕಾಂಗ್ರೆಸ್‌ ಗೆ ಕೈಕೊಟ್ಟ 26 ನಾಯಕರು

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಸಮೀ‍ಪಿಸುತ್ತಿದ್ದಂತೆಯೇ ಪ್ರದೇಶ ಕಾಂಗ್ರೆಸ್‌ ಸಮಿತಿಯ ಮಾಜಿ ಕಾರ್ಯದರ್ಶಿ ಸೇರಿ ಒಟ್ಟು 26 ಮಂದಿ ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.


ಮತದಾನಕ್ಕೆ ಕೇವಲ 4 ದಿನ ಮಾತ್ರ ಉಳಿದಿರುವಾಗ ಈ ಬೆಳವಣಿಗೆ ನಡೆದಿದ್ದು, ಕಾಂಗ್ರೆಸ್‌ ನಲ್ಲಿ ಭಾರಿ ತಲ್ಲಣವುಂಟು ಮಾಡಿದೆ.
ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌ ಹಾಗೂ ಹಿಮಾಚಲ ಪ್ರದೇಶ ಬಿಜೆಪಿ ಉಸ್ತುವಾರಿ ಸುಧಾನ್‌ ಸಿಂಗ್‌ ಅವರ ಸಮ್ಮುಖದಲ್ಲಿ, ಹಿಮಾಚಲ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಕಾರ್ಯದರ್ಶಿ ಧರ್ಮಪಾಲ ಠಾಕೂರ್‌ ಸಹಿತ ಒಟ್ಟು 26 ಮಂದಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.


ಪಕ್ಷಕ್ಕೆ ಆಗಮಿಸಿದವರಿಗೆ ಶುಭ ಕೋರಿದ ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌, ‘ಪಕ್ಷದ ಐತಿಹಾಸಿಕ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸೋಣ‘ ಎಂದು ಹೇಳಿದ್ದಾರೆ.


ಹಿಮಾಚಲದಲ್ಲಿ ನವೆಂಬರ್‌ 12 ರಂದು ಮತದಾನ ನಡೆಯಲಿದ್ದು, ಡಿಸೆಂಬರ್‌ 8ಕ್ಕೆ ಮತ ಎಣಿಕೆ ನಡೆಯಲಿದೆ.

Join Whatsapp
Exit mobile version