Home ಕರಾವಳಿ ಮಂಗಳೂರು | ವೀಡಿಯೋದಲ್ಲಿರುವ ವ್ಯಕ್ತಿ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿಲ್ಲ: ಎಡಿಜಿಪಿ ಸ್ಪಷ್ಟನೆ

ಮಂಗಳೂರು | ವೀಡಿಯೋದಲ್ಲಿರುವ ವ್ಯಕ್ತಿ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿಲ್ಲ: ಎಡಿಜಿಪಿ ಸ್ಪಷ್ಟನೆ

ಮಂಗಳೂರು: ನಾಗುರಿಯಲ್ಲಿ ನಡೆದ ಆಟೋ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮದಲ್ಲಿ ಇಬ್ಬರು ಯುವಕರು ಬ್ಯಾಗ್’ನೊಂದಿಗೆ ವೈನ್’ಶಾಪ್’ಗೆ ಹೋಗಿದ್ದಾರೆ ಎಂಬ ವೀಡಿಯೋ ಬಗ್ಗೆ ಸ್ಪಷ್ಟನೆ ನೀಡಿರುವ ಎಡಿಜಿಪಿ ಅಲೋಕ್ ಕುಮಾರ್, ವೀಡಿಯೋದಲ್ಲಿರುವ ವ್ಯಕ್ತಿ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಈ ವೀಡಿಯೊದಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಗಳು ಮಂಗಳೂರು ಸ್ಫೋಟ ಘಟನೆಯಲ್ಲಿ ಭಾಗಿಯಾಗಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ. ದಯವಿಟ್ಟು ವದಂತಿ ಹಬ್ಬಿಸಲು ಕಾರಣವಾಗಬೇಡಿ ಹಾಗೂ ವದಂತಿಗಳಿಗೆ ಕಿವಿಗೊಡಬೇಡಿ ಶಾಂತಿಯನ್ನು ಕಾಪಾಡಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದ್ದಾರೆ.


ಇನ್ನು ಈ ಕುರಿತು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, ಆರೋಪಿ ಇನ್ನೋರ್ವನ ಜತೆ ಬಂದಿದ್ದ ಎಂಬ ವೀಡಿಯೋ ವೈರಲ್ ಆಗುತ್ತಿರುವುದನ್ನು ಗಮನಿಸಲಾಗಿದೆ. ಆದರೆ ವೀಡಿಯೋ ಪ್ರಕರಣದ ಆರೋಪಿಯದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Join Whatsapp
Exit mobile version