ಶಿಲ್ಲಾಂಗ್ : ಮುಕ್ರೋಹ್’ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟ ಹಿನ್ನೆಲೆಯಲ್ಲಿ ಮೇಘಾಲಯ ಸರ್ಕಾರ ನವೆಂಬರ್ 22 ರಿಂದ 48 ಗಂಟೆಗಳ ಕಾಲ 7 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ.
ಪಶ್ಚಿಮ ಜೈನ್ತಿಯಾ ಹಿಲ್ಸ್, ಪೂರ್ವ ಜೈನ್ತಿಯಾ ಹಿಲ್ಸ್ , ಪೂರ್ವ ಖಾಸಿ ಹಿಲ್ಸ್ , ರಿ-ಭೋಯಿ, ಪೂರ್ವ ಪಶ್ಚಿಮ ಖಾಸಿ ಹಿಲ್ಸ್ , ಪಶ್ಚಿಮ ಖಾಸಿ ಹಿಲ್ಸ್ , ನೈಋತ್ಯ ಖಾಸಿ ಹಿಲ್ಸ್ ಈ 7 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಅಸ್ಸಾಂ-ಮೇಘಾಲಯ ಗಡಿಯಲ್ಲಿರುವ ಮುಕ್ರೋಹ್ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ಅಕ್ರಮ ಮರಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ಪೊಲೀಸರು ತಡೆದ ನಂತರ ನಡೆದ ಗುಂಡಿನ ದಾಳಿಯಲ್ಲಿ ಪಶ್ಚಿಮ ಜೈನ್ತಿಯಾ ಹಿಲ್ಸ್ ನ ಮೂವರು ಮತ್ತು ಅಸ್ಸಾಂ ಅರಣ್ಯ ರಕ್ಷಕ ಸೇರಿದಂತೆ ನಾಲ್ವರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ.