Home ಟಾಪ್ ಸುದ್ದಿಗಳು ಕುಡಿದು ಕಾರ್ ಚಲಾಯಿಸಿ ಇಬ್ಬರನ್ನು ಕೊಂದ ಉದ್ಯಮಿಯ ಅಪ್ರಾಪ್ತ ಪುತ್ರನಿಗೆ 14 ಗಂಟೆಯೊಳಗೆ ಜಾಮೀನು

ಕುಡಿದು ಕಾರ್ ಚಲಾಯಿಸಿ ಇಬ್ಬರನ್ನು ಕೊಂದ ಉದ್ಯಮಿಯ ಅಪ್ರಾಪ್ತ ಪುತ್ರನಿಗೆ 14 ಗಂಟೆಯೊಳಗೆ ಜಾಮೀನು

ಪುಣೆ: ಪಾನಮತ್ತನಾಗಿ ಅಡ್ಡಾದಿಡ್ಡಿ ಕಾರ್ ಚಲಾಯಿಸಿ ಇಬ್ಬರನ್ನು ಕೊಂದ ಖ್ಯಾತ ಉದ್ಯಮಿಯ ಅಪ್ರಾಪ್ತ ವಯಸ್ಸಿನ ಪುತ್ರನಿಗೆ ಬಂಧನಕ್ಕೊಳಗಾದ 14 ಗಂಟೆಯೊಳಗೆ ಜಾಮೀನು ಸಿಕ್ಕಿದೆ.

ಭಾನುವಾರ ನಸುಕಿನ ಜಾವ ಪುಣೆಯ ಕಲ್ಯಾಣಿನಗರದಲ್ಲಿ ಸುನಾಮಿ ವೇಗದಲ್ಲಿ ಬಂದ ಪೋರ್ಷೆ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದರು.ಈ ಭೀಕರ ಅಪಘಾತಕ್ಕೆ ಕಾರಣವಾದ ಐಷಾರಾಮಿ ಕಾರನ್ನು ಬಾಲಾಪರಾಧಿ ಓಡಿಸುತ್ತಿದ್ದ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಸಾವನ್ನಪ್ಪಿದ್ದ ಅಮಾಯಕರನ್ನು ಮಧ್ಯಪ್ರದೇಶ ಮೂಲದ ಅನಿಸ್ ಅವಧಿಯಾ (24) ಮತ್ತು ಅಶ್ವಿನಿ ಕೋಸ್ಟಾ (24) ಎಂದು ಗುರುತಿಸಲಾಗಿದ್ದು, ಇಬ್ಬರೂ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದಾರೆ. ಅಪಘಾತ ಸಂಭವಿಸಿದಾಗ ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ ಎಂದು ತಿಳಿದು ಬಂದಿದೆ. ಅವರು ಪಕ್ಕದ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮುಗಿಸಿ ತಮ್ಮ ಮೋಟರ್‌ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ಈ ಮಾರಣಾಂತಿಕ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಅಚ್ಚರಿಯ ಸಂಗತಿ ಎಂದರೆ, ಈ ಕಾರ್ ಅಪಘಾತ ನಡೆದು ಆರೋಪಿ ಬಂಧನಕ್ಕೊಳಗಾದ 14 ಗಂಟೆಗಳೊಳಗೆ ಜಿಲ್ಲಾ ನ್ಯಾಯಾಲಯದಿಂದ ಕೊಲೆಗಾರ ಅಪ್ರಾಪ್ತ ಆರೋಪಿಗೆ ಜಾಮೀನು ಸಿಕ್ಕಿದೆ. ಪೊಲೀಸರ ಪ್ರಕಾರ, ಬಾಲಾಪರಾಧಿ ಮಾಡಿದ ಅಪರಾಧವನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸದ ಕಾರಣ ಜಾಮೀನು ನೀಡಲಾಗಿದೆಯಂತೆ.

ಆರೋಪಿಗೆ ಜಾಮೀನು ನೀಡುವಾಗ ಶರತ್ತುಗಳ ವಿಚಿತ್ರ ಅನ್ನಿಸಿಕೊಂಡಿದ್ದು, ಆ ಪೈಕಿ ಆರೋಪಿಗೆ 300 ಪದಗಳಲ್ಲಿ ಅಪಘಾತದ ಕುರಿತಾದ ಪ್ರಬಂಧವನ್ನು ಬರೆಯಲು ಸೂಚಿಸಿದೆ, ಅದರ ಜೊತೆಗೆ ಟ್ರಾಫಿಕ್ ಪೊಲೀಸರ ಜೊತೆಗೆ 15 ದಿನ ಕೆಲಸ ಮಾಡುವಂತೆ ಹೇಳಿದೆ. ಅಷ್ಟು ಮಾತ್ರವಲ್ಲದೇ ಕುಡಿಯುವುದನ್ನು ನಿಲ್ಲಿಸಲು ವೈದ್ಯರಿಂದ ಟ್ರೀಟ್‌ಮೆಂಟ್ ಪಡೆಯಬೇಕು, ನಂತರ ಮನೋಶಾಸ್ತ್ರಜ್ಞರಿಂದ ಕೌನ್ಸೆಲಿಂಗ್ ಪಡೆದು ಅದರ ವರದಿಯನ್ನು ಒಪ್ಪಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.

Join Whatsapp
Exit mobile version