Home ಟಾಪ್ ಸುದ್ದಿಗಳು ಮತಯಂತ್ರಕ್ಕೆ ಮಾಲಾರ್ಪಣೆ ಮಾಡಿದ ಪಕ್ಷೇತರ ಅಭ್ಯರ್ಥಿ ವಿರುದ್ಧ ಪ್ರಕರಣ

ಮತಯಂತ್ರಕ್ಕೆ ಮಾಲಾರ್ಪಣೆ ಮಾಡಿದ ಪಕ್ಷೇತರ ಅಭ್ಯರ್ಥಿ ವಿರುದ್ಧ ಪ್ರಕರಣ

ನಾಸಿಕ್: ಮತಚಲಾಯಿಸುವ ವೇಳೆ ಇವಿಎಂ ಯಂತ್ರಕ್ಕೆ ಮಾಲಾರ್ಪಣೆ ಮಾಡಿದ ನಾಸಿಕ್ ನ ಪಕ್ಷೇತರ ಅಭ್ಯರ್ಥಿ ಶಾಂತಿಗಿರಿ ಮಹಾರಾಜ್ ಅವರ ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪಡಿ ದೂರು ದಾಖಲಿಸಲಾಗಿದೆ.

ತ್ರಿಂಬಕೇಶ್ವರದಲ್ಲಿರುವ ಎಂವಿಪಿ ಕಾಲೇಜು ಮತಗಟ್ಟೆಗೆ 25–30 ಬೆಂಬಲಿಗರೊಂದಿಗೆ ಬಂದ ಮಹಾರಾಜ್ ಅವರು, ತನ್ನ ಕತ್ತಲ್ಲಿದ್ದ ಮಾಲೆಯೊಂದನ್ನು ತೆಗೆದು ಇವಿಎಂ ಯಂತ್ರಕ್ಕೆ ಹಾಕಿದ್ದಾರೆ. ಬಳಿಕ ಮತ ಚಲಾಯಿಸಿದ್ದಾರೆ ಎಂದು ಪೊಲೀಂಗ್ ಅಧಿಕಾರಿ ದೂರಿನಲ್ಲಿ ಹೇಳಿದ್ದಾರೆ.

Join Whatsapp
Exit mobile version