ಪಾಟ್ನಾ: ಪಾಗಲ್ ಪ್ರೇಮಿಗಳು ಜಗತ್ತಿನ ಎಲ್ಲಾ ಕಡೆ ಎಲ್ಲಾ ಕ್ಷೇತ್ರದಲ್ಲೂ ಇದ್ದಾರೆ. ತಮ್ಮ ಪ್ರಿಯತಮೆಯನ್ನು ತಲುಪಲು ಇಲ್ಲೊಬ್ಬ ಇಡೀ ಊರಿನ ಪವರ್ ಕಟ್ ಮಾಡುತ್ತಿದ್ದ ಘಟನೆ ಬಿಹಾರದ ಪುರ್ನಿಯಾದಲ್ಲಿ ವರದಿಯಾಗಿದೆ.
ಪುರ್ನಿಯಾ ಜಿಲ್ಲೆಯ ಗಣೇಶ್ಪುರರ ಗ್ರಾಮದ ಜನರು ಅಕ್ಕಪಕ್ಕದ ಹಳ್ಳಿಗಳಲ್ಲಿ ಯಾವುದೇ ರೀತಿಯ ಕರೆಂಟ್ ಸಮಸ್ಯೆಯಾಗುತ್ತಿಲ್ಲ. ಆದರೆ ನಮ್ಮ ಹಳ್ಳಿಯಲ್ಲಿ ಮಾತ್ರ ಯಾಕೆ ಈ ರೀತಿಯಾಗುತ್ತಿದೆ ಎಂದು ಯೋಚಿಸುತ್ತಿದ್ದು ಆಗಾಗ್ಗೆ ಈ ಸಮಸ್ಯೆ ಕಾಣಿಸಿಕೊಳ್ಳುವುದು ಎಲ್ಲರ ಅನುಮಾನಕ್ಕೆ ಕಾರಣವಾಗಿ ಇದಕ್ಕೆ ನಿಖರವಾದ ಕಾರಣ ಹುಡುಕಲು ನಿರ್ಧರಿಸಿದರು ಎನ್ನಲಾಗಿದೆ.
ಈ ಕುರಿತು ಪರಿಶೀಲಿಸಿದ ನಂತರ, ಎಲೆಕ್ಟ್ರಿಷಿಯನ್ ತನ್ನ ಗೆಳತಿಯನ್ನು ಕತ್ತಲೆಯಲ್ಲಿ ಭೇಟಿಯಾಗಲು ಹಳ್ಳಿಯ ವಿದ್ಯುತ್ ಸರಬರಾಜನ್ನು ಕಡಿತಗೊಳಿಸುತ್ತಿರುವುದು ತಿಳಿದು ಗ್ರಾಮಸ್ಥರು ಆಘಾತಕ್ಕೊಳಗಾದರು. ಲೈನ್ ಮ್ಯಾನ್ ನನ್ನು ಹಿಡಿಯಲು ನಿರ್ಧರಿಸಿದ ಗ್ರಾಮಸ್ಥರು ಒಂದು ಯೋಚನೆ ರೂಪಿಸಿದ್ದು ಪ್ಲಾನ್ ಮಾಡಿದ ರೀತಿಯಲ್ಲಿಯೇ ಲೈನ್ ಮ್ಯಾನ್ ಬಂದಿದ್ದು, ಎಲ್ಲರೂ ಕೋಪಗೊಂಡು ಅವನನ್ನು ಥಳಿಸಿದ್ದಾರೆ. ನಂತರ ಅವರು ಲೈನ್‌ಮ್ಯಾನ್ ಗ್ರಾಮದಲ್ಲಿ ಮೆರವಣಿಗೆ ಮಾಡಿಸಿದ್ದಾರೆ.
ಇದಕ್ಕೆ ಪರಿಹಾರ ಕಂಡುಕೊಳ್ಳಲು ಗ್ರಾಮಸ್ಥರು ಗ್ರಾಮದ ಮುಖ್ಯಸ್ಥ ಹಾಗೂ ಇತರ ಗ್ರಾಮಸಭೆ ಸದಸ್ಯರ ಸಮ್ಮುಖದಲ್ಲಿ ಆತ ತನ್ನ ಪ್ರೇಯಸಿಯನ್ನು ಮದುವೆಯಾಗುವಂತೆ ತೀರ್ಮಾನವೂ ಮಾಡಲಾಗಿದೆ ಎಂದು ತಿಳಿದು ಬಂದಿವೆ.