Home ಟಾಪ್ ಸುದ್ದಿಗಳು ಕಟ್ಟಾ ಹಿಂದುತ್ವವಾದಿಗಳಿಂದ ಮುಸ್ಲಿಮರ ಮೇಲೆ ಅಪಪ್ರಚಾರ: ಪೊಲೀಸರ ಕಳವಳ

ಕಟ್ಟಾ ಹಿಂದುತ್ವವಾದಿಗಳಿಂದ ಮುಸ್ಲಿಮರ ಮೇಲೆ ಅಪಪ್ರಚಾರ: ಪೊಲೀಸರ ಕಳವಳ

ಬೆಂಗಳೂರು: ಕೆಲವು ಕಟ್ಟರ್ ಹಿಂದುತ್ವವಾದಿ ಗುಂಪುಗಳು ಮುಸ್ಲಿಮರನ್ನು ಗುರಿಯಾಗಿಸಿ ಕೆಲಸ ಮಾಡುತ್ತಿರುವುದು ಪೊಲೀಸರನ್ನು ಕಳವಳಕ್ಕೆ ದೂಡಿದೆ. ಈ ಗುಂಪುಗಳಲ್ಲಿ ಹಲವರು ಹಿಂದೆಯೂ ಅಪರಾಧ ಹಿನ್ನೆಲೆ ಹೊಂದಿದವರಾಗಿದ್ದಾರೆ. ಶ್ರೀರಾಮ ಸೇನೆ, ಹಿಂದೂ ಜಾಗರಣ ವೇದಿಕೆ, ಹೊಸ ಭಾರತ ರಕ್ಷಣಾ ವೇದಿಕೆ ಇವೆಲ್ಲ ಈ ಮುಸ್ಲಿಮ್ ವಿರೋಧಿ ಪ್ರಚಾರದಲ್ಲಿ ಮುಂದಿದ್ದು, ಮಾಧ್ಯಮಗಳಲ್ಲಿಯೂ ಮುಂಚೂಣಿ ಪ್ರಚಾರದಲ್ಲಿವೆ.


ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಅವರು ಮಸೀದಿಗಳ ಆಝಾನ್ ವಿರುದ್ಧ ಹನುಮಾನ್ ಚಾಲಿಸಾ, ರಾಮನವಮಿ ಮೆರವಣಿಗೆ, ಹಲಾಲ್ ಮತ್ತು ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ ಇತ್ಯಾದಿ ವಿಷಯದಲ್ಲಿ ನಿತ್ಯ ಸುದ್ದಿಯಲ್ಲಿದ್ದಾರೆ. ಪೊಲೀಸರೊಬ್ಬರ ಪ್ರಕಾರ ಶ್ರೀರಾಮ ಸೇನೆ ಹಲವು ತುಂಡಾಗಿದ್ದು, ಮುತಾಲಿಕ್ ಬಲ ನಗಣ್ಯ. ಆದರೂ ಇತ್ತೀಚೆಗೆ ಎಲ್ಲ ಟೀವಿಗಳಲ್ಲೂ ಅವರು ಕಾಣುತ್ತಿದ್ದಾರೆ.


ಹಿಂದೂ ಜನ ಜಾಗೃತಿ ಸಮಿತಿಯ ಹಲವರು ಸಂಶೋಧಕ ಎಂ.ಎಂ. ಕಲಬುರಗಿ ಕೊಲೆಯ ಆರೋಪಿಗಳು. ಅದರಿಂದಲೇ ಇನ್ನೊಂದು ಭಾರತ ರಕ್ಷಣಾ ವೇದಿಕೆ ಹುಟ್ಟಿದೆ. ಇವರೆಲ್ಲ ಜಾಲತಾಣಗಳ ಮೂಲಕ ದ್ವೇಷ ಹರಡುವ ಮೂಲಕ ಅಡ್ಡ ಹಾದಿಯ ಜನಪ್ರಿಯತೆ ಗಳಿಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ಕೋಮು ಧ್ರುವೀಕರಣ ಮಾಡುವ ಕೆಲಸ ಕರ್ನಾಟಕದಲ್ಲಿ ಕಳೆದ ನಾಲ್ಕೈದು ತಿಂಗಳುಗಳಿಂದ ವೇಗವಾಗಿ ನಡೆದಿದ್ದು, ಈ ಎಲ್ಲ ಹಿಂದುತ್ವವಾದಿ ಗುಂಪುಗಳು ಅದರಲ್ಲಿ ಈಡುಗೊಂಡಿವೆ. ಗೌರಿ ಲಂಕೇಶ್ ಕೊಲೆಯಲ್ಲಿ ಗುಂಡು ಹಾರಿಸಿದ ವ್ಯಕ್ತಿಯನ್ನು ಮೂಲ ಸಂಸ್ಥೆಗೆ ತಿಳಿಯದಂತೆ ಇತ್ತೀಚೆಗೆ ಶ್ರೀರಾಮ ಸೇನೆಗೆ ಸೇರಿಸಿಕೊಳ್ಳಲಾಗಿದೆ.


ಕರಾವಳಿ ಪ್ರದೇಶಗಳಲ್ಲಿ ಬಹುಕಾಲ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ ಕೋಮು ಕಿಚ್ಚನ್ನು ಕರಾವಳಿಯಲ್ಲಿ ಜೀವಂತವಾಗಿ ಇಟ್ಟವರು ಈಗ ಅದನ್ನು ಕರ್ನಾಟಕದ ಮೂಲೆ ಮೂಲೆಗೂ ಹರಡುವಲ್ಲಿ ಯಶಸ್ವಿಯಾಗಿದ್ದಾರೆ.
ಹಿಜಾಬ್ ಗಲಾಟೆ ಉಡುಪಿಯಿಂದ ಮಂಡ್ಯ ಮೊದಲಾದ ಊರುಗಳಿಗೆ ಹರಡಿದ್ದು ಆಝಾನ್ ವಿರುದ್ಧ ಸುಪ್ರಭಾತ ಮೈಸೂರಿನಲ್ಲಿ ಕೇಳಿಸಿದ್ದು, ಕರಾವಳಿಯ ಮುಸ್ಲಿಮ್ ವಿರೋಧಿ ಮಾದರಿಯು ಈಗ ರಾಜ್ಯವ್ಯಾಪಿ ಆಗುತ್ತಿದೆ ಎಂಬ ಕಳವಳವನ್ನು ಆ ಪೊಲೀಸ್ ಅಧಿಕಾರಿ ವ್ಯಕ್ತಪಡಿಸಿದರು.

ದ್ವೇಷ ಪ್ರಚಾರದ ವಿರುದ್ಧ ಕೆಲಸ ಮಾಡುವ ವಿನಯ್ ಶ್ರೀನಿವಾಸ ಹೇಳುತ್ತಾರೆ, ಮಾಧ್ಯಮಗಳು ಅದರಲ್ಲೂ ಜೀವಿಗಳು ಹಿಂದುತ್ವದ ಪರವಾಗಿ ಕೆಲಸ ಮಾಡುತ್ತ ಮುಸ್ಲಿಮ್ ವಿರೋಧಿ ಸುದ್ದಿ, ಚರ್ಚೆಗಳಿಗೆ ಮಹತ್ವ ನೀಡುತ್ತವೆ. ತಿರುಚಿದ ಸುದ್ದಿಗಳು, ಮತ್ತೆ ಮತ್ತೆ ಪ್ರಚೋದಕ ಸುದ್ದಿಗಳು ಪ್ರಸಾರ ಆಗುತ್ತಿವೆ. ಆ್ಯಂಕರ್ ಗಳೇ ದ್ವೇಷ ಆತುಕೊಂಡಿರುವುದು ಆತಂಕಕಾರಿ. ಇತ್ತೀಚೆಗೆ ಕೆಲವು ಚಾನೆಲ್ ಗಳ ಕೆಲವರ ಮೇಲೆ ಪ್ರಕರಣಗಳು ಕೂಡ ದಾಖಲಾಗಿವೆ. ಟೀವಿಗಳು ಹಿಂದುತ್ವ ಪೆಟ್ಟಿಗೆಗಳಾಗಿವೆ.


ಬಿಜೆಪಿಯ ಕೆಲವು ನಾಯಕರು ಇಂತಹವರ ಹಿಂದೆ ಬೆನ್ನು ತಟ್ಟುವ, ಇತರ ಬೆಂಬಲ ನೀಡುವ ಕೆಲಸ ಮಾಡುತ್ತಾರೆ. ಆದರೆ ಕೆಲವು ಬಿಜೆಪಿ ನಾಯಕರಿಗೆ ಇದು ಒಗ್ಗಿಲ್ಲ. ಕೋಮು ಧ್ರುವೀಕರಣದಿಂದ ಬಿಜೆಪಿಗೆ ಮತ ಬರುತ್ತದೆ ನಿಜ. ಆದರೆ ಈ ಹಿಂದುತ್ವವಾದಿ ಸಂಘಟನೆಗಳ ಹಲವರು ಅಪಾಯಕಾರಿ ವ್ಯಕ್ತಿಗಳು ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದರು.
(ಕೃಪೆ: ದಿ ಹಿಂದೂ)

Join Whatsapp
Exit mobile version