Home ಟಾಪ್ ಸುದ್ದಿಗಳು ಕೊಚ್ಚಿಯಲ್ಲಿ ವಾಸವಿದ್ದ ಯಹೂದಿ ಸಮುದಾಯದ ಕೊನೆಯ ಮಹಿಳೆ ಮೃತ್ಯು

ಕೊಚ್ಚಿಯಲ್ಲಿ ವಾಸವಿದ್ದ ಯಹೂದಿ ಸಮುದಾಯದ ಕೊನೆಯ ಮಹಿಳೆ ಮೃತ್ಯು

ಕೊಚ್ಚಿ: ಯಹೂದಿ ಸಮುದಾಯಕ್ಕೆ ಸೇರಿದ ಕೊನೆಯ ಮಹಿಳೆ ಕ್ವೀನಿ ಹಲ್ಲೆಗುವಾ(89) ವಯೋಸಹಜ ಕಾಯಿಲೆಯಿಂದ ಮಟ್ಟಂಚೇರಿಯಲ್ಲಿರುವ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ.

ಕೊಚ್ಚಿಯಲ್ಲಿ ಉಳಿದಿರುವ ಏಕೈಕ ಯಹೂದಿ ಸಮುದಾಯದ ಸದಸ್ಯ ಎಂದು ‘ಪರದೇಸಿ ಸಿನಗಾಗ್‘ ಟ್ರಸ್ಟ್ ನ ಎಂ.ಸಿ. ಪ್ರವೀಣ್ ಹೇಳಿದರು.

‘ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಲ್ಲೆಗುವಾ ಅವರನ್ನು ನೋಡಿಕೊಳ್ಳಲು ಅವರ ಮಕ್ಕಳು ಇಲ್ಲಿಗೆ ಬಂದಿದ್ದರು. ಭಾನುವಾರ ಅವರು ಮೃತಪಟ್ಟಿದ್ದಾರೆ. ಏಳು ದಿನಗಳ ಕಾಲ ಶೋಕಾಚರಣೆ ಇರಲಿದೆ. ಅವರ ನೆನಪಿನಲ್ಲಿ ಸಮಾಧಿ ಕಟ್ಟಿಸಲಾಗುತ್ತದೆ’ ಎಂದು ಅವರು ತಿಳಿಸಿದರು.

ಕ್ವೀನಿ ಹಲ್ಲೆಗುವಾ ಅವರು ಭಾನುವಾರ ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆಯನ್ನು ಇಲ್ಲಿನ ಯಹೂದಿ ಸ್ಮಶಾನದಲ್ಲಿ ಸಮುದಾಯದ ವಿಧಿ ವಿಧಾನಗಳ ಪ್ರಕಾರ ನಡೆಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಹಲ್ಲೆಗುವಾ ಅವರು ಮಗ ಮತ್ತು ಮಗಳನ್ನು ಅಗಲಿದ್ದು, ಮಕ್ಕಳಿಬ್ಬರು ಅಮೆರಿಕದಲ್ಲಿ ವಾಸವಾಗಿದ್ದಾರೆ.

Join Whatsapp
Exit mobile version